ಲಯನ್ಸ್ ಸಂಯುಕ್ತ ಪಿಯು ಕಾಲೇಜಿಗೆ ಶೇ.94 ಫಲಿತಾಂಶ

 ಎನ್.ಗೌತಮ್
ಎನ್.ಗೌತಮ್
Published on
ಕೊಳ್ಳೇಗಾಲ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ 94.96ರಷ್ಟು ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 52 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 5, ಪ್ರಥಮ ದರ್ಜೆಯಲ್ಲಿ 35, ದ್ವಿತೀಯ ದರ್ಜೆಯಲ್ಲಿ 7, ತೃತೀಯ ದರ್ಜೆಯಲ್ಲಿ 3 ವಿದ್ಯಾ ರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಸುಂಬುಲಾ ಪಿರ್ಧೋಸ 569, ನಿಶಾನ್‌ಮೂರ್ತಿ 563, ಎಸ್.ಸಿಂಚನಾ 537, ಸಿ.ಕಿರಣ್ ಕುಮಾರ್ 531, ಜಾರ ನಿಖತ್ 520 ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 87 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 23, ಪ್ರಥಮ ದರ್ಜೆ 55, ದ್ವಿತೀಯ ದರ್ಜೆ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಎನ್.ಗೌತಮ್ 560, ಎಂ.ಶೈನಪ್ರಿಯಾ 560, ಪಿ.ನಮಿತಾ 558, ಎಂ.ಎಸ್.ತನ್ವಿ 554, ಎಸ್.ಸುಹಾಸ್ 550, ಕೆ.ವಚನಾ 547, ಎಲ್. ಸಂಪತ್ 544, ಪ್ರಿಯದರ್ಶಿನಿ 540, ಹರಿವೇಲಾಯುಧಮ್ 539, ಕೀರ್ತಿಶ್ರೀ 539, ಎಸ್.ದಿವ್ಯಾ 531, ಅಫೀಜಾಮರಿಯಂ 530, ಅಕ್ಷಯ್ ಕುಮಾರ್ 530, ಅಪೂರ್ವ 527, ಎಚ್.ಪಿ. ಮನೋಜ್ ಕುಮಾರ್ 527, ಮರ್ಫಾನಿಖತ್ 526, ಸೈಯದ್ ಷಯಬುದ್ಧಿನ್ 524, ಎಸ್.ಸಂಜನಾ 519, ಸಿದ್ದರಾಜು 518, ಕೆ.ಕಿರಣ್ ಕುಮಾರ್ 517, ಪಿ.ಮಂಜುಳಾ 516, ಮಹಮ್ಮದ್ ಉಮರ್ 514, ಸ್ಫೂರ್ತಿ 514 ಅಂಕ ಗಳಿಸಿದ್ದಾರೆ.
100 ಕ್ಕೆ 100 ಅಂಕ ಪಡೆದವರು: ಲೆಕ್ಕಶಾಸ್ತ್ರ ವಿಷಯದಲ್ಲಿ ನಿಶಾಂತ್‌ಮೂರ್ತಿ, 100 ಕ್ಕೆ 100, ಭೌತಶಾಸ್ತ್ರ ವಿಷಯದಲ್ಲಿ ಎಂ.ಗೌತಮ್ 100 ಕ್ಕೆ 100 ಅಂಕ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net