ಹನೂರಲ್ಲಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಸಜ್ಜಾಗಲಿ

ಹನೂರಿನಲ್ಲಿ ಆಯೋಜಿಸಿದ್ಧ ಎಸ್‌ಐಆರ್ ಪರಿಶೀಲನಾ ಸಭೆಯನ್ನು ಜನಧ್ವನಿ ಬಿ.ವೆಂಕಟೇಶ್ ಉದ್ಘಾಟಿಸಿದರು. ಮಲ್ಲಿಕಾರ್ಜುನಪ್ಪ, ಆಶ್ವಿನಿ, ಬಾಲಸುಬ್ರಹ್ಮಣ್ಯಂ, ವೃಷಭೇಂದ್ರಸ್ವಾಮಿ, ಲೋಕೇಶ್ ಜತ್ತಿ ಇತರರಿದ್ದರು.
ಹನೂರಿನಲ್ಲಿ ಆಯೋಜಿಸಿದ್ಧ ಎಸ್‌ಐಆರ್ ಪರಿಶೀಲನಾ ಸಭೆಯನ್ನು ಜನಧ್ವನಿ ಬಿ.ವೆಂಕಟೇಶ್ ಉದ್ಘಾಟಿಸಿದರು. ಮಲ್ಲಿಕಾರ್ಜುನಪ್ಪ, ಆಶ್ವಿನಿ, ಬಾಲಸುಬ್ರಹ್ಮಣ್ಯಂ, ವೃಷಭೇಂದ್ರಸ್ವಾಮಿ, ಲೋಕೇಶ್ ಜತ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಕ್ಷದ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ವೆಂಕಟೇಶ್ ಸಲಹೆ
  • ಎಸ್‌ಐಆರ್ ಪರಿಶೀಲನೆ, ಬಿಎಲ್‌ಎ ಕಾರ್ಯಾಗಾರ

ಹನೂರು:

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹನೂರಿನಲ್ಲಿ ಬಿಜೆಪಿ ಗೆಲ್ಲಬೇಕು. ಆದ್ದರಿಂದ ಪ್ರತಿಯೊಬ್ಬರೂ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪಕ್ಷದ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ಬಿ. ವೆಂಕಟೇಶ್ ತಿಳಿಸಿದರು.

ಪಟ್ಟಣದ ಆರ್.ಎಸ್.ದೊಡ್ಡಿಯ ಖಾಸಗಿ ರೆಸಿಡೆನ್ಸಿ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಎಸ್‌ಐಆರ್ ಪರಿಶೀಲನೆ ಹಾಗೂ ಬಿಎಲ್‌ಎಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಳೆದ 2 ತಿಂಗಳಿನಿಂದ ಈ ಪ್ರಕ್ರಿಯೆಯಲ್ಲಿ ಭಾಗಿಯಾದ ಬಿಎಲ್‌ಎಗಳ ಶ್ರಮ ಅಪಾರ. ಇದೀಗ ಸರ್ಕಾರದಿಂದ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಆಕ್ಷೇಪಣೆ ಸಲ್ಲಿಕೆಗೆ ಒಂದು ತಿಂಗಳು ಕಾಲಾವಕಾಶವಿದೆ. ಮುಂಬರುವ ಚುನಾವಣೆಗಳಿಗೆ ಈ ಪರಿಷ್ಕರಣೆಯ ಪಟ್ಟಿಯೇ ಆಧಾರವಾಗಿರುವುದರಿಂದ ಪ್ರತಿಯೊಬ್ಬರೂ ಪಟ್ಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿಬೇಕು. ಬಿಜೆಪಿಯ ಒಬ್ಬ ಮತದಾರರು ಪಟ್ಟಿಯಿಂದ ಕೈ ಬಿಟ್ಟು ಹೋಗದಂತೆ ಹಾಗೂ ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವಂತಹ ಕೆಲಸವಾಗಬೇಕು ಎಂದು ತಿಳಿಸಿದರು.
ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ನಾಯಕತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹನೂರಿನಲ್ಲಿ ಬಿಜೆಪಿ ಗೆಲ್ಲಬೇಕು ಎಂಬುದಾಗಿ ನಾಯಕರಿಂದ ಸೂಚನೆ ಬಂದಿದೆ. ಗ್ರಾಪಂ, ತಾಪಂ, ಜಿಪಂ ಚುನಾವಣೆಯಲ್ಲೂ ಬಿಜೆಪಿ ಧ್ವಜ ಹಾರಿಸಬೇಕಿದೆ. ಹಾಗಾಗಿ ಮಂಡಲ ಅಧ್ಯಕ್ಷರ ಜತೆಗೂಡಿ ಪ್ರತಿ ಬೂತ್‌ಗೂ ಭೇಟಿ ನೀಡಿ ಪಕ್ಷ ಸಂಘಟಿಸುವುದರ ಮೂಲಕ ಪಕ್ಷದ ಗೆಲುವಿಗೆ ಸದಾ ನಿಮ್ಮೊಂದಿಗೆ ಇರುತ್ತೇನೆ. ಆದ್ದರಿಂದ ಪ್ರತಿಯೊಬ್ಬರೂ ಈಗಿನಿಂದಲೇ ಸಜ್ಜಾಗಬೇಕು ಎಂದರು.
ಎಸ್‌ಐಆರ್ ಮೈಸೂರು ವಿಭಾಗೀಯ ಉಸ್ತುವಾರಿ ಅಶ್ವಿನಿ ಮಾತನಾಡಿ, ರಾಜ್ಯದಲ್ಲಿ 2028ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿಯಾಗಲಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು. ಪಕ್ಷದ ಮತದಾರರು ಪಟ್ಟಿಯಿಂದ ಬಿಟ್ಟು ಹೋಗದಂತೆ ಅಗತ್ಯ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಲ್ಲಿಕಾರ್ಜುನಪ್ಪ, ಎಸ್‌ಐಆರ್ ಪ್ರಭಾರಿ ಸ್ವಾಮಿ ಮರುಳಾಪುರ, ಬಾಲಸುಬ್ರಹ್ಮಣ್ಯಂ, ಜಿಲ್ಲಾ ಉಪಾಧ್ಯಕ್ಷ ರೇವಣ್ಣ, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಮಂಡಲಾಧ್ಯಕ್ಷ ವೃಷಭೇಂದ್ರಸ್ವಾಮಿ, ಮ.ಬೆಟ್ಟದ ಮುರುಗೇಶ್, ಪ್ರಧಾನ ಕಾರ್ಯದರ್ಶಿ ವರಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷರಾದ ಮೀನಾ, ಜಯಲಕ್ಷ್ಮೀ, ಬಿಎಲ್‌ಒ ಲೋಕೇಶ್ ಜತ್ತಿ, ಮಂಡಲ ಮಾಜಿ ಅಧ್ಯಕ್ಷ ಜಗನ್ನಾಥನಾಯ್ಡು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net