ಶರಣರ ತತ್ವಾದರ್ಶ ಬದುಕಿನ ಕೈಗನ್ನಡಿಯಾಗಲಿ

ಯಳಂದೂರು ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕುಂತೂರು ಶ್ರೀ ಶಿವಪ್ರಭುಸ್ವಾಮಿಜಿ ಉದ್ಘಾಟಿಸಿದರು. ಡಾ.ಬಿ.ಪ್ರಭುಸ್ವಾಮಿ, ಬಿ.ನಂಜುಂಡಸ್ವಾಮಿ, ಗುರುಸಿದ್ದಪ್ಪ, ಎನ್ರಿಚ್ ಮಹದೇವಸ್ವಾಮಿ, ಮಹದೇವಸ್ವಾಮಿ, ಪಿ.ಮಹದೇವಪ್ಪ, ಶಿವಕುಮಾರ್ ಇತರರಿದ್ದರು.
ಯಳಂದೂರು ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕುಂತೂರು ಶ್ರೀ ಶಿವಪ್ರಭುಸ್ವಾಮಿಜಿ ಉದ್ಘಾಟಿಸಿದರು. ಡಾ.ಬಿ.ಪ್ರಭುಸ್ವಾಮಿ, ಬಿ.ನಂಜುಂಡಸ್ವಾಮಿ, ಗುರುಸಿದ್ದಪ್ಪ, ಎನ್ರಿಚ್ ಮಹದೇವಸ್ವಾಮಿ, ಮಹದೇವಸ್ವಾಮಿ, ಪಿ.ಮಹದೇವಪ್ಪ, ಶಿವಕುಮಾರ್ ಇತರರಿದ್ದರು.
Published on
ಯಳಂದೂರು: ಹನ್ನೆರಡನೇ ಶತಮಾನದ ಶರಣರ ಬದುಕು ಹಾಗೂ ಅವರ ತತ್ವಾದರ್ಶಗಳು ಪ್ರಸ್ತುತ ನಮ್ಮ ಬದುಕಿನ ಕೈಗನ್ನಡಿಯಾಗಬೇಕು ಎಂದು ಮೈಸೂರು ಜೆಎಸ್‌ಎಸ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಿ.ಪ್ರಭುಸ್ವಾಮಿ ಹೇಳಿದರು.
ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಶರಣ ತತ್ವಾಮೃತ ಸಿಂಚನ 12ನೇ ಮಾಲಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿ, ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ, ದೇವರ ದಾಸೀಮಯ್ಯ, ಮಾದಾರ ಚನ್ನಯ್ಯ ಸೇರಿದಂತೆ ಸಾವಿರಾರು ಶರಣರು ಪ್ರಾಮಾಣಿಕವಾಗಿ ಸೇವೆ ಮಾಡಿ, ನಿಷ್ಠೆ ಮೂಲಕ ಬದುಕು ಸಾಗಿಸಿದ ಮಹನೀಯರಾಗಿದ್ದಾರೆ. ಕಾಯಕ ನಿಷ್ಠೆಯೊಂದಿಗೆ ಸಮಾಜವನ್ನು ತಿದ್ದುವ ಇವರ ಪ್ರಾಮಾಣಿಕ ಪ್ರಯತ್ನ ಅವಿಸ್ಮರಣೀಯ. ಇವರ ಬದುಕನ್ನು ನಾವು ಅಭ್ಯಸಿಸಿ ಆ ದಿಕ್ಕಿನಲ್ಲೇ ನಡೆದರೆ ಮಹಾನ್ ಹಾದಿಯಾಗಲಿದೆ. ಕಲುಷಿತವಾಗಿರುವ ನಮ್ಮ ಬದುಕು, ಸಮಾಜವನ್ನು ಹಸನುಗೊಳಿಸುವ ಕೆಲಸ ಮಾಡಬೇಕಿದ್ದು, ಈ ದಿಕ್ಕಿನಲ್ಲಿ ಎಲ್ಲರೂ ಯೋಚಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಕುಂತೂರು ವೀರಸಿಂಹಾಸನ ಮಠಾಧ್ಯಕ್ಷರಾದ ಶ್ರೀ ಶಿವಪ್ರಭುಸ್ವಾಮಿಜಿ ಮಾತನಾಡಿ, ಶರಣರು ಹಾಕಿಕೊಟ್ಟ ಮಾರ್ಗ ನಮಗೆ ಆದರ್ಶವಾಗಬೇಕು. ಪ್ರಸ್ತುತ ಸಮಾಜದಲ್ಲಿ ಶಾಂತಿ, ನೆಮ್ಮದಿ, ತೃಪ್ತಿಕರ ಜೀವನ ಕನಸಾಗಿಯೇ ಉಳಿದಿದೆ. ಇದು ಕೆಲವರ ಪಾಲಾಗಿದೆ. ನಮ್ಮ ಜೀವನವನ್ನು ಉನ್ನತೀಕರಿಕೊಳ್ಳಲು ನಾವು ಶರಣರ ವಚನಗಳ ಸಾರ, ಅವರ ಜೀವನವನ್ನು ಅಭ್ಯಸಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಬಿ.ನಂಜುಂಡಸ್ವಾಮಿ ಮತನಾಡಿ, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ತಾಲೂಕಿನ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ನಿವೃತ್ತ ನೌಕರರನ್ನೂ ಸನ್ಮಾನಿ
ಸಲು ಚಿಂತಿಸಲಾಗಿದ್ದು, ಆ ನಿಟ್ಟಿನಲ್ಲಿ ಸಂಘ ಕಾರ್ಯ ಪ್ರವೃತ್ತವಾಗಿದೆ ಎಂದು ಮಾಹಿತಿ ನೀಡಿದರು.
ಬಸವಶ್ರೀ ಪತ್ತಿನ ಸಂಘದ ಅಧ್ಯಕ್ಷ ಗುರುಸಿದ್ದಪ್ಪ ಮಾತನಾಡಿದರು. ಬಸವ ಬಳಗದ ಜಿಲ್ಲಾಧ್ಯಕ್ಷ ಎನ್ರಿಚ್ ಮಹದೇವಸ್ವಾಮಿ, ಶಿಕ್ಷಕರಾದ ಮಹದೇವಸ್ವಾಮಿ, ಪಿ.ಮಹದೇವಪ್ಪ, ಶಿವಕುಮಾರ್, ಮಹದೇವಪ್ಪ, ಮಲ್ಲಣ್ಣ, ಶಿವಕುಮಾರಸ್ವಾಮಿ, ಲೋಕೇಶಮೂರ್ತಿ, ರವಿ, ಮಲ್ಲಪ್ಪ, ವೀರಣ್ಣ, ಸಿ.ಮಹದೇವು ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net