ಸರ್ಕಾರ ತಲಾ 1 ಕೋಟಿ ರೂ.ಪರಿಹಾರ ವಿತರಿಸಲಿ

ತೊಮಿಯಾರ್‌ಪಾಳ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿ ಸೋಜಾ ಮಾತನಾಡಿದರು.
ತೊಮಿಯಾರ್‌ಪಾಳ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿ ಸೋಜಾ ಮಾತನಾಡಿದರು.
Published on

ಹನೂರು :

ಶೂಟೌಟ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ 1 ಕೋಟಿ ರೂ.ಪರಿಹಾರ ನೀಡುವುದರ ಜತೆಗೆ ಪ್ರಕರಣವನ್ನು ಎಸ್‌ಐಟಿಗೆ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿ ಸೋಜಾ ಹೇಳಿದರು.

ತಾಲೂಕಿನ ತೊಮಿಯಾರ್‌ಪಾಳ್ಯಕ್ಕೆ ಸೋಮವಾರ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಅರಣ್ಯ ಇಲಾಖೆ ಕಾಯ್ದೆ ಉಲ್ಲಂಘಿಸಿ ಮೂವರನ್ನು ಗುಂಡಿಕ್ಕಿ ಕೊಂದಿರುವುದು ನಿಜಕ್ಕೂ ಖಂಡನೀಯ. ಯಾರಿಂದಲೂ ಜೀವ ಮತ್ತೆ ಕೊಡಲು ಸಾಧ್ಯವಿಲ್ಲ. ಇಲ್ಲಿ ಬಲಿ ತೆಗೆದುಕೊಳ್ಳಬೇಕಾದ ಯಾವ ಅವಶ್ಯಕತೆಯೂ ಇರಲಿಲ್ಲ. ಹಾಗಾಗಿ ಅರಣ್ಯ ಇಲಾಖೆ ಗಡಿರೇಖೆ ಮೀರಿ ತಪ್ಪು ಮಾಡಿದೆ. ಆದ್ದರಿಂದ ಸರ್ಕಾರ ನೀಡಿರುವ 5 ಲಕ್ಷ ರೂ.ಪರಿಹಾರದ ಜತೆಗೆ ಕನಿಷ್ಠ 1 ಕೋಟಿ ರೂ.ಪರಿಹಾರ ನೀಡಬೇಕು. ಎಲ್ಲ ರೀತಿಯಲ್ಲೂ ಸಹಾಯ ಮಾಡಬೇಕು. ನೊಂದ ಕುಂಟುಂಬಕ್ಕೆ ನ್ಯಾಯ ಸಿಗಬೇಕಾದರೆ ಈ ಪ್ರಕರಣವನ್ನು ಕೂಡಲೇ ಎಸ್‌ಐಟಿಗೆ ವಹಿಸಿ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net