ಸಮಾಜವನ್ನು ಎಚ್ಚರಿಸುವ ಕವಿತೆಗಳು ರಚನೆಯಾಗಲಿ

 ಚಾಮರಾಜನಗರ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅನುಪಮಾ ಟ್ರಸ್ಟ್‌ನ ಮೊದಲ ವರ್ಷದ ವಾರ್ಷಿಕೋತ್ಸವ ಸಮಾರಂಭದ ಕೃತಿ ಬಿಡುಗಡೆ ಮಾಡಲಾಯಿತು. ಡಾ.ಪಿ.ಪ್ರೇಮಾ, ಆರ್.ನಂಜುಂಡಯ್ಯ, ಪ್ರಸನ್ನಕುಮಾರ್, ಬಳೇಪೇಟೆ ಪ್ರಕಾಶ್, ಕಿರಣ್ ಮತ್ತು ಇತರರು ಉಪಸ್ಥಿತರಿದ್ದರು.
ಚಾಮರಾಜನಗರ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅನುಪಮಾ ಟ್ರಸ್ಟ್‌ನ ಮೊದಲ ವರ್ಷದ ವಾರ್ಷಿಕೋತ್ಸವ ಸಮಾರಂಭದ ಕೃತಿ ಬಿಡುಗಡೆ ಮಾಡಲಾಯಿತು. ಡಾ.ಪಿ.ಪ್ರೇಮಾ, ಆರ್.ನಂಜುಂಡಯ್ಯ, ಪ್ರಸನ್ನಕುಮಾರ್, ಬಳೇಪೇಟೆ ಪ್ರಕಾಶ್, ಕಿರಣ್ ಮತ್ತು ಇತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಾಯಕ ರವಿಕುಮಾರ್ ಸಲಹೆ
  • ಅನುಪಮಾ ಸೇವಾ ಟ್ರಸ್ಟ್ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭ
ಚಾಮರಾಜನಗರ: ಸಮಾಜದ ತಪ್ಪುಗಳನ್ನು ತಿದ್ದುವ ಶಕ್ತಿ ಕವಿತೆಗಳಿವೆ. ಈ ಹಿನ್ನೆಲೆಯಲ್ಲಿ ಕವಿಗಳು ಸಮಾಜವನ್ನು ಎಚ್ಚರಿಸುವಂತ ಕವಿತೆಗಳನ್ನು ರಚನೆ ಮಾಡಿರಿ ಎಂದು ಗಾಯಕ ರವಿಕುಮಾರ್ ಸಲಹೆ ನೀಡಿದರು.
ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅನುಪಮಾ ಟ್ರಸ್ಟ್‌ನ ಮೊದಲ ವರ್ಷದ ವಾರ್ಷಿಕೋತ್ಸವ ಸಮಾರಂಭದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕವಿತೆಗಳು ಜನರ ಕಷ್ಟಗಳನ್ನು ಅಭಿವ್ಯಕ್ತಿಸಬೇಕು. ಕವಿಗಳು ಸಂಕಷ್ಟದಲ್ಲಿರುವ ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವ ರೂವಾರಿಗಳಾಗಬೇಕು. ಶಿಕ್ಷಣದ ಗುರಿ ಕಲಿತದ್ದನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಾಗಿದೆ. ಅಂದರೆ, ಶಾಲೆ-ಕಾಲೇಜುಗಳ ಕೊಠಡಿಗಳ ಒಳಗೆ ಕಲಿತದ್ದನ್ನು ಸಮಾಜಕ್ಕೆ ನೀಡುವುದಾಗಿದೆ. ಆದರೆ ಇಂದಿನ ಯುವಕರು ಬಾವುಟ ಕಟ್ಟುವ ಸಂಸ್ಕೃತಿ ಬೆಳೆಸಿಕೊಳ್ಳುತ್ತಿದ್ದಾರೆ. ಶಾಸಕರ ಹಿಂಬಾಲಕರಾಗಿರುವ ತಂದೆಯ ಹಾದಿಯಲ್ಲೇ ಮಕ್ಕಳೂ ಸಾಗುತ್ತಿರುವುದರಿಂದ ಈ ಬಾವುಟ ಕಟ್ಟುವ ಸಂಸ್ಕೃತಿ ಬೆಳೆಯುತ್ತಲೇ ಇದೆ ಎಂದರು.
ಪ್ರಸ್ತುತ ಸಮಾಜದಲ್ಲಿ ವ್ಯವಸ್ಥೆಯಲ್ಲಿನ ವ್ಯತಿರಿಕ್ತ ಬದಲಾವಣೆಗಳು ಎದ್ದು ಕಾಣುತ್ತಿವೆ. ಗಂಧದಗುಡಿ ಚಿತ್ರದಲ್ಲಿ ವರನಟ ಡಾ.ರಾಜ್‌ಕುಮಾರ್ ಅರಣ್ಯ, ವನ್ಯಜೀವಿಗಳ ರಕ್ಷಣೆ ಮತ್ತು ಗಂಧದ ಮರಗಳ ಉಳಿವಿಗಾಗಿ ಸಂದೇಶ ಸಾರಿದರು. ಆದರೆ ತೆಲುಗಿನ ಪುಷ್ಪ ಚಿತ್ರದಲ್ಲಿ ಗಂಧದ ಮರ ಕಳ್ಳತನ, ಅರಣ್ಯ ನಾಶದ ಕಥೆ ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡಿತು. ಇದರಲ್ಲಿ ಅಭಿನಯಿಸಿದ ನಟ ಅಲ್ಲು ಅರ್ಜುನ್‌ಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂತು ಎಂದು ಹೇಳಿದರು.
ನೆರೆಯ ರಾಷ್ಟ್ರಗಳ ನಡುವಿನ ಯುದ್ಧದ ಪರಿಣಾಮ ಬೇರೆ ರಾಷ್ಟ್ರಗಳ ಮೇಲೂ ಪ್ರಭಾವ ಬೀರುತ್ತಿದೆ. ನ್ಯಾಯಕ್ಕಾಗಿ ಯುದ್ಧ ಮಾಡುತ್ತಿರುವುದಾಗಿ ಹೇಳಲಾಗುತ್ತದೆ. ಒಂದು ಯುದ್ಧ ಅಸಂಖ್ಯಾತ ಜನರ ಮಾರಣ ಹೋಮವನ್ನೇ ಮಾಡುತ್ತದೆ. ಯುದ್ಧ ಹೋಗಲು ಬುದ್ಧ ಬರಬೇಕು. ಯುದ್ಧಕ್ಕೆ ಬುದ್ಧನೇ ಪರಿಹಾರ. ಇದನ್ನು ಕವಿಗಳು ತಮ್ಮ ಕವಿತೆಯಲ್ಲಿ ಎಚ್ಚರಿಸಬೇಕು. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಿದ್ದ ಕೆಲಸವನ್ನು ಅನುಪಮಾ ಟ್ರಸ್ಟ್ ಮಾಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ನಿಷ್ಕ್ರಿಯವಾಗಿ ಹೋಗಿದೆ ಎಂದರು.
ಹಾವೇರಿ ಆರೋಗ್ಯ ಇಲಾಖೆಯ ಸುರೇಶ್ ಮಾತನಾಡಿ, ಕವಿಗಳು ಆರೋಗ್ಯದ ಮೇಲೆ ಕಾಳಜಿಯನ್ನು ಇಟ್ಟುಕೊಳ್ಳಬೇಕು. ಪ್ರತಿದಿನ ವಾಕಿಂಗ್ ಮಾಡುವುದನ್ನು ಬಿಡಬಾರದು. ಕಾಲುಗಳು ಬಲಿಷ್ಠವಾಗಿದ್ದರೆ ಮಾತ್ರ ದೇಹ ಸಧೃಡವಾಗಿರುತ್ತದೆ. ಇಲ್ಲದಿದ್ದರೆ ಮಧುಮೇಹದಂತ ಕಾಯಿಲೆಗಳು ಬರುತ್ತವೆ. ಮೊಸರು, ಮಜ್ಜಿಗೆಯನ್ನು ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆ ಮಾತ್ರ ಸೇವನೆ ಮಾಡಿ. ಸಂಜೆಗೆ ಮೊಸರು ಮತ್ತು ಮಜ್ಜಿಗೆಯಲ್ಲಿರುವ ಒಳ್ಳೆಯ ಬ್ಯಾಕ್ಟಿರಿಯಾಗಳು ಜೀವ ಕಳೆದುಕೊಂಡಿರುತ್ತವೆ ಎಂದು ವಿವರಿಸಿದರು.
ಮನಸ್ಸು ಹೇಳುವ ಮಾತನ್ನು ಕೇಳಬಾರದು. ಮೆದುಳು ಹೇಳುವುದನ್ನು ಪಾಲನೆ ಮಾಡಬೇಕು. ಮುಂಜಾನೆ ಬಿಸಿನೀರು, ಬೆಳ್ಳುಳ್ಳಿ ಸೇವನೆ ಮಾಡಿದರೆ ಉತ್ತಮ ಆರೋಗ್ಯ ಲಭಿಸುತ್ತದೆ. ಕವಿಗಳು ವರ್ಷಕ್ಕೆ ಒಂದು ಪುಸ್ತಕವನ್ನು ಹೊರತರಬೇಕು ಎಂದರು ಸಲಹೆ ನೀಡಿದರು.
ಇದೇ ವೇಳೆ ವೇದ ಸಿರಿ ಮತ್ತು ನೀಲಿರಾಗ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರಿಗೆ ಉತ್ತಮ ಶಿಕ್ಷಕ ಸೇವಾ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಕಲಾ ಸಿರಿ ಪ್ರಶಸ್ತಿ, ಆದರ್ಶ ದಂಪತಿಗಳ ಸೇವಾ ರತ್ನ ಪ್ರಶಸ್ತಿ, ರಾಷ್ಟ್ರಮಟ್ಟದ ಕಿತ್ತೂರು ಚೆನ್ನಮ್ಮ ಸೇವಾ ಪ್ರಶಸ್ತಿ, ರಾಷ್ಟ್ರಮಟ್ಟದ ಇಮ್ಮಡಿ ಪುಲಕೇಶಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕಡೆಗಳಿಂದ ಬಂದಿದ್ದ ಕವಿಗಳು ಕವಿತೆ ವಾಚನ ಮಾಡಿ ಗಮನ ಸೆಳೆದರು. \
ಯಳಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಆರ್.ನಂಜುಂಡಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಅನುಪಮಾ ಟ್ರಸ್ಟ್ ಅಧ್ಯಕ್ಷೆ ಡಾ.ಪಿ.ಪ್ರೇಮಾ, ಸಮಾಜ ಸೇವಕ ಓಲೆ ಮಹದೇವು, ವಕೀಲ ಪ್ರಸನ್ನ ಕುಮಾರ್, ಕವಿ ಬಳೇಪೇಟೆ ಪ್ರಕಾಶ್, ತಾಂತ್ರಿಕ ಸಹಾಯಕ ಇಂಜಿನಿಯರ್ ಕಿರಣ್ ಮತ್ತು ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net