ಕುಷ್ಠರೋಗ ಗುಣಪಡಿಸಬಹುದಾದ ಕಾಯಿಲೆ

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಕುಷ್ಟರೋಗ ಅರಿವು ಅಭಿಯಾನ ನಡೆಸಲಾಯಿತು. ನಾಗೇಂದ್ರ, ಸುದರ್ಶನ್, ಕಮಲಾ, ಅನಿತಾ ಇದ್ದರು.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಕುಷ್ಟರೋಗ ಅರಿವು ಅಭಿಯಾನ ನಡೆಸಲಾಯಿತು. ನಾಗೇಂದ್ರ, ಸುದರ್ಶನ್, ಕಮಲಾ, ಅನಿತಾ ಇದ್ದರು.
Published on
ಗುಂಡ್ಲುಪೇಟೆ: ಮೈಮೇಲೆ ತಾಮ್ರವರ್ಣದ ಮಚ್ಚೆಗಳು ಕಂಡು ಬಂದರೆ ಕೂಡಲೆ ವೈದ್ಯರ ಬಳಿ ತಪಾಸಣೆಗೆ ಒಳಗಾಗಬೇಕು ಎಂದು ಹಿರಿಯ ಆರೋಗ್ಯ ನಿರೀಕ್ಷಕ ಎನ್.ನಾಗೇಂದ್ರ ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕುಷ್ಠರೋಗ ಅರಿವು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕುಷ್ಠರೋಗ ವಂಶಪಾರಂಪರ್ಯವಾಗಿ ಬರುವುದಿಲ್ಲ. ಚರ್ಮದ ಮೇಲೆ ಬಿಳಿ ಹಾಗೂ ತಾಮ್ರವರ್ಣದ ಮಚ್ಚೆಗಳು ಕಂಡುಬರುವುದು, ಅವುಗಳಲ್ಲಿ ಸ್ಪರ್ಷ ಜ್ಞಾನವಿಲ್ಲದಿದ್ದರೆ ಕೂಡಲೇ ವೈದ್ಯರ ತಪಾಸಣೆಗೊಳಪಡಬೇಕು. ಕುಷ್ಠರೋಗಗಳ ಬಗ್ಗೆ ಅಸಹ್ಯಪಟ್ಟುಕೊಳ್ಳದೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿದರೆ ರೋಗವನ್ನು ಗುಣಪಡಿಸಬಹುದು, ಈ ಬಗ್ಗೆ ಆರೋಗ್ಯ ಇಲಾಖೆ ತನ್ನ ವ್ಯಾಪ್ತಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದೆ ಎಂದು ಹೇಳಿದರು.
ಶಾಲೆಯ ಮುಖ್ಯಶಿಕ್ಷಕಿ ಕಮಲಾ, ಆರೋಗ್ಯ ನಿರೀಕ್ಷಕ ಸುದರ್ಶನ್, ಮುಖ್ಯಶಿಕ್ಷಕಿ ಅನಿತಾ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net