ನೇನೆಕಟ್ಟೆ ಗ್ರಾಮದೊಳಗೆ ಓಡಾಡಿದ ಚಿರತೆ

ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮದೊಳಗೆ ಚಿರತೆಯೊಂದು ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮದೊಳಗೆ ಚಿರತೆಯೊಂದು ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • ನೇನೇಕಟ್ಟೆ ಗ್ರಾಮದೊಳಗೆ ಚಿರತೆ
ಗುಂಡ್ಲುಪೇಟೆ: ತಾಲೂಕಿನ ನೇನೇಕಟ್ಟೆ ಗ್ರಾಮದೊಳಗೆ ಚಿರತೆಯೊಂದು ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಭೀತಿಯುಂಟುಮಾಡಿದೆ. 
ಗುರುವಾರ ತಡರಾತ್ರಿ ಬಂಡೀಪುರ ಹುಲಿ ಯೋಜನೆಯ ಗುಂಡ್ಲುಪೇಟೆ ಬಫರ್ ವಲಯಕ್ಕೆ ಸೇರಿದ ಗ್ರಾಮದ ಒಳಗೆ ಪ್ರವೇಶಿಸಿರುವ ಚಿರತೆ ಯಾವುದೇ ಆತಂಕವಿಲ್ಲದೆ ಬೀದಿಗಳಲ್ಲಿ ಓಡಾಟ ನಡೆಸಿದೆ. ಸದ್ಯ ಚಿರತೆ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಚಿರತೆಯ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net