ಪಡಗೂರು ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ

ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ಬೋನಿಗೆ ಬಿದ್ದಿರುವ ಚಿರತೆ.
ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ಬೋನಿಗೆ ಬಿದ್ದಿರುವ ಚಿರತೆ.
Published on
ಗುಂಡ್ಲುಪೇಟೆ: ತಾಲೂಕಿನ ಪಡಗೂರು ಗ್ರಾಮದಲ್ಲಿ ಹುಲಿ ಸೆರೆಗೆ ಅಳವಡಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿ ಸೆರೆಗೆ ಗ್ರಾಮಸ್ಥರು ತೀವ್ರ ಒತ್ತಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಬಫರ್ ವಲಯದ ಅಧಿಕಾರಿಗಳು ಗ್ರಾಮದ ಮಹದೇವಸ್ವಾಮಿ ಅವರ ಜಮೀನಿನಲ್ಲಿ ತುಮಕೂರು ಮಾದರಿಯ ಬೋನು ಅಳವಡಿಸಿ ಹುಲಿಯನ್ನು ಆಕರ್ಷಿಸಲು ಬೋನಿನೊಳಗೆ ಕರು ಕಟ್ಟಿದ್ದರು. ಆದರೆ ಬುಧವಾರ ಬೆಳಗ್ಗೆ ಹತ್ತು ಗಂಟೆ ಸಮಯದಲ್ಲಿ ಕರುವನ್ನು ತಿನ್ನಲು ಒಳಗೆ ಬಂದ 3 ವರ್ಷ ವಯಸ್ಸಿನ ಗಂಡು ಚಿರತೆ ಬೋನಿನೊಳಗೆ ಸೆರೆಯಾಗಿದೆ.
ವಿಷಯ ತಿಳಿದ ಕೂಡಲೇ ಅಕ್ಕಪಕ್ಕದ ಗ್ರಾಮಗಳ ಜನರು ಚಿರತೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಬೇರೊಂದು ಬೋನಿಗೆ ಸ್ಥಳಾಂತರಿಸಿ ಬಂಡೀಪುರ ಅರಣ್ಯಕ್ಕೆ ಕೊಂಡೊಯ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net