ಬಸವಾಪುರದಲ್ಲಿ ಚಿರತೆ ಸೆರೆ

ಬಸವಾಪುರ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಬಸವಾಪುರ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
Published on
ಗುಂಡ್ಲುಪೇಟೆ: ತಾಲೂಕಿನ ಬಸವಾಪುರ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಗ್ರಾಮದ ಸುತ್ತಮುತ್ತಲೂ ಜಾನುವಾರುಗಳನ್ನು ಬಲಿಪಡೆದಿದ್ದ ಚಿರತೆಯ ಸೆರೆಗೆ ಬಫರ್ ವಲಯದ ಅರಣ್ಯಾಧಿಕಾರಿಗಳು, ಸಲೀಂ ಎಂಬುವರ ಜಮೀನಿನಲ್ಲಿ ಬೋನು ಇರಿಸಿದ್ದರು. ಗುರುವಾರ ನಸುಕಿನಲ್ಲಿ ಬೋನಿನೊಳಗೆ ಕೂಡಿಹಾಕಿದ್ದ ನಾಯಿಯನ್ನು ತಿನ್ನಲು ಬಂದ ಚಿರತೆ ಸೆರೆಯಾಗಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಬೋನಿಗೆಬಿದ್ದ ಚಿರತೆಯನ್ನು ಬಂಡೀಪುರಕ್ಕೆ ಕೊಂಡೊಯ್ದು ಕಾಡಿಗೆ ಬಿಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net