ಶಾಸಕ ಭೇಟಿ, ನೆರವು ಕೊಡಿಸುವ ಭರವಸೆ: ಸ್ಥಳಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಇಲ್ಲಿ ನಿರಂತರವಾಗಿ ಚಿರತೆ ಸೇರಿದಂತೆ ಕಾಡುಪ್ರಾಣಿಗಳ ದಾಳಿ ನಡೆಯುತ್ತಿದೆ. ಇತ್ತೀಚೆಗೆ ಐದಾರು ಬಾರಿ ದಾಳಿ ನಡೆಸಿ, ಹಸು, ಕರು, ಕುರಿಗಳನ್ನು ಬಲಿ ಪಡೆದಿದೆ. ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷೃವೇ ಕಾರಣವಾಗಿದೆ.