ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆಯಲ್ಲಿ 1 ವರ್ಷದಿಂದ ಚರಂಡಿಯಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸಿಲ್ಲ. ಕುಂತೂರು ಪಿಡಿಒ ಅವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈ ನಡುವೆ ಗ್ರಾಮಕ್ಕೆ ಬಂದ ತಾ.ಪಂ ಇಒ ಕಾರಲ್ಲೇ ಕುಳಿತು ಉತ್ತರ ನೀಡುತ್ತಿದ್ದರು. ಮೊದಲು ಕಾರಿನಿಂದ ಕೆಳಗಿಳಿದು ಸಮಸ್ಯೆ ನೋಡಿ ಎಂದಾಗ ಮಾತಿಗೆ ಮಾತಿ ಬೆಳೆಯಿತು. ಈ ನಡುವೆ ಶಾಸಕರಿಗೂ ಕರೆ ಮಾಡಿ ನನಗೆ ಫೋನ್ ಕೊಟ್ಟಿದ್ದು, ಚರಂಡಿ ಸ್ವಚ್ಛಗೊಳಿಸದೆ ಸಮಸ್ಯೆಯಾಗಿದೆ ಎಂದು ಶಾಸಕರ ಬಳಿ ದೂರಿದೆ. ನಂತರ, ಇಒ ಚರಂಡಿ ವೀಕ್ಷಣೆ ಮಾಡಿದರು. ಸಮಸ್ಯೆಯನ್ನು ಕಾರಿನಿಂದ ಇಳಿದು ನೋಡಿ ಎಂದಿದ್ದಕ್ಕೆ ದಾದಾಗಿರಿ ಮಾಡ್ತಿದ್ದೀಯಾ ಎಂದರಲ್ಲದೆ, ನನಗೆ ಅವ್ಯಾಚ ಶಬ್ದದಿಂದ ನಿಂದಿಸಿದ್ದಾರೆ. ಇನ್ನು ಕುಂತೂರು ಪಂಚಾಯಿತಿ ಕಾರ್ಯದರ್ಶಿ ಮಹಿಳೆಯರು ಎದುರು ಬಯ್ದಿದ್ದಾರೆ. ಇವರ ಮೇಲೆ ಕ್ರಮವಾಗಬೇಕು ಎಂದು ಕುಂತೂರು ನಿವಾಸಿ ಮಹೇಶ್ ಹೇಳಿದರು.