ಯೂರಿಯಾ ಸಂಗ್ರಹಿಸಿಟ್ಟಿದ್ದ ಆರೋಪಿ ಬಂಧನ

 ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿ ಯ ನ್ನು ವಶಕ್ಕೆ ಪಡೆದಿರುವುದು
ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿ ಯ ನ್ನು ವಶಕ್ಕೆ ಪಡೆದಿರುವುದು
Published on
ಕೊಳ್ಳೇಗಾಲ : ತಾಲೂಕಿನ ಜಾಗೇರಿ ಹಳೇ ಕೋಟೆ ಅರಣ್ಯ ಪ್ರದೇಶದೊಳಗೆ ಬಾಣಲೆಯಲ್ಲಿ ಯೂರಿಯಾ ಸಂಗ್ರಹಿಸಿ ಇಟ್ಟಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಹಳೇ ಕೋಟೆಯ ವೆಟ್ರಿವೇಲ್ (46) ಎಂಬಾತ ಬಂಧಿತ. ಡಿ.6 ರಂದು ಹಳೇ ಕೋಟೆ ಅರಣ್ಯದೊಳಗೆ ಮೇವು ತಿನ್ನಲು ಹೋಗಿದ್ದ 11 ಮೇಕೆ ಮರಿಗಳು ಮೃತಪಟ್ಟಿದ್ದವು. ವಿಚಾರ ತಿಳಿದ ಕೊಳ್ಳೇಗಾಲ ಬಫರ್ ವಲಯದ ಆರ್.ಎಫ್.ಓ. ರವಿಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ಈ ವೇಳೆ ಕಾಡಿನೊಳಗೆ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾ ದೊರೆತಿತ್ತು. ಕಾಡು ಪ್ರಾಣಿ ಗಳನ್ನು ಸಾಯಿಸಲು ಯಾರೋ ಈ ಕೃತ್ಯವ್ಯ ನಡೆ ಸಿರ ಬಹುದೆಂದು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದಾಗ ಆರೋಪಿ ವೆಟ್ರಿವೇಲ್ ಎಂಬಾತನನ್ನು ಮಂಗಳವಾರ ವಶಕ್ಕೆ ಪಡೆದು ಮುಂದಿನ ಕ್ರಮ ವಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net