ಕಿಂಗ್ ಆಫ್ ಸೂರ್ಯವಂಶ ತಂಡಕ್ಕೆ ಚಾಂಪಿಯನ್ ಪಟ್ಟ

ಯಳಂದೂರು ಸಮೀಪದ ಚಾಮರಾಜನಗರ ತಾಲೂಕಿನ ತೆಂಕಲಮೋಳೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಭಗೀರಥ ಪ್ರೀಮಿಯರ್ ಕ್ರಿಕೇಟ್ ಲೀಗ್ ಸೀಸನ್-3 ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಿಂಗ್ ಆಫ್ ಸೂರ್ಯವಂಶ  ತಂಡಕ್ಕೆ ಟ್ರೋಫಿಯನ್ನು  ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕುಮಾರ್, ಗುರುಲಿಂಗಯ್ಯ, ಚೇತನ್‌ಕುಮಾರ್ ವಿತರಿಸಿದರು.
ಯಳಂದೂರು ಸಮೀಪದ ಚಾಮರಾಜನಗರ ತಾಲೂಕಿನ ತೆಂಕಲಮೋಳೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಭಗೀರಥ ಪ್ರೀಮಿಯರ್ ಕ್ರಿಕೇಟ್ ಲೀಗ್ ಸೀಸನ್-3 ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಿಂಗ್ ಆಫ್ ಸೂರ್ಯವಂಶ ತಂಡಕ್ಕೆ ಟ್ರೋಫಿಯನ್ನು ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕುಮಾರ್, ಗುರುಲಿಂಗಯ್ಯ, ಚೇತನ್‌ಕುಮಾರ್ ವಿತರಿಸಿದರು.
Published on

ಭಗೀರಥ ಪ್ರೀಮಿಯರ್ ಕ್ರಿಕೆಟ್ ಲೀಗ್ ಸೀಸನ್-3 ಕ್ರಿಕೆಟ್ ಪಂದ್ಯ

ಯಳಂದೂರು: ಚಾಮರಾಜನಗರ ತಾಲೂಕಿನ ತೆಂಕಲಮೋಳೆ ಗ್ರಾಮದಲ್ಲಿ ಭಗೀರಥ ಉಪ್ಪಾರ ಯುವಕರ ಸಂಘದಿಂದ ಆಯೋಜಿಸಲಾಗಿದ್ದ ಭಗೀರಥ ಪ್ರೀಮಿಯರ್ ಕ್ರಿಕೇಟ್ ಲೀಗ್ ಸೀಸನ್-3 ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಿಂಗ್ ಆಫ್ ಸೂರ್ಯವಂಶ ತಂಡವು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
ಎರಡು ದಿನ ನಡೆದ ಪಂದ್ಯಾವಳಿಯಲ್ಲಿ ಭಾನುವಾರ ಸಂಜೆ ನಡೆದ ಪೈನಲ್‌ನ 6 ಓವರ್‌ಗಳ ಪಂದ್ಯದಲ್ಲಿ ಭಗೀರಥ ಯುವ ಲಯನ್ಸ್ ತಂಡದ 33 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಗಿರಿ ನಾಯಕತ್ವದ ಕಿಂಗ್ ಆಫ್ ಸೂರ್ಯವಂಶ ತಂಡವು 5.3 ಓವರ್ ಗಳಲ್ಲಿ 34 ರನ್ ಗಳಿಸಿ ವಿಜೇತರಾದರು. ಗೆದ್ದ ತಂಡಕ್ಕೆ 10 ಸಾವಿರ ನಗದು, ಟ್ರೋಫಿಯನ್ನು ನೀಡಲಾಯಿತು, ನಂತರ ದ್ವಿತೀಯ ಸ್ಥಾನ ಪಡೆದ ಭಗೀರಥ ಯುವ ಲಯನ್ಸ್ ತಂಡಕ್ಕೆ 5 ಸಾವಿರ ರೂ. ನಗದು, ಟ್ರೋಫಿಯನ್ನು ವಿತರಿಸಲಾಯಿತು.
ನಂತರ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕುಮಾರ್ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಆಟದಲ್ಲಿ ಪಾಲ್ಗೊಳ್ಳುವುದು ಮುಖ್ಯ. ಕ್ರೀಡೆಗಳು, ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಕ್ರಿಕೆಟ್ ಇಂದು ನಮ್ಮ ದೇಶದ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಆದ್ದರಿಂದ ಈ ರೀತಿಯ ಕ್ರೀಡೆ, ಶೈಕ್ಷಣಿಕ ಚಟುವಟಿಕೆಗೂ ಹೆಚ್ಚಿನ ಒತ್ತನ್ನು ನೀಡಿ ಶಿಕ್ಷಣಕ್ಕೂ ಹೆಚ್ಚು ಆದ್ಯತೆ ನೀಡಬೇಕೆಂದು ಕರೆ ನೀಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಬಡಗಲ ಮೋಳೆ ಆರ್.ಚೇತನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ತಾಲೂಕು ಅಧ್ಯಕ್ಷ ಬಳೇಪೇಟೆ ಸಿದ್ದರಾಜು, ಕೆಸ್ತೂರು ಗ್ರಾಪಂ ಸದಸ್ಯ ಗುರುಲಿಂಗಯ್ಯ, ಗ್ರಾಮದ ಯಜಮಾನರಾದ ಪುಟ್ಟಸ್ವಾಮಿಶೆಟ್ಟಿ, ವೆಂಕಟೇಶ್, ಸುಂದರಶೆಟ್ಟಿ, ಸೇರಿದಂತೆ ಯುವಕ ಸಂಘದ ಸದಸ್ಯರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net