ಕೊಳ್ಳೇಗಾಲ ಲಯನ್ಸ್‌ಗೆ ಸುವರ್ಣ ಸಂಭ್ರಮ

  ಕೊಳ್ಳೇಗಾಲ ಲಯನ್ಸ್ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಲಯನ್ಸ್ ಸಂಸ್ಥೆಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಬಿ.ಎಂ.ಪುಟ್ಟಮಾದಪ್ಪ  ಅಧಿಕಾರ ಸ್ವೀಕರಿಸಿದರು.
ಕೊಳ್ಳೇಗಾಲ ಲಯನ್ಸ್ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಲಯನ್ಸ್ ಸಂಸ್ಥೆಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಬಿ.ಎಂ.ಪುಟ್ಟಮಾದಪ್ಪ ಅಧಿಕಾರ ಸ್ವೀಕರಿಸಿದರು.
Published on
ಕೊಳ್ಳೇಗಾಲ : ಮುಂಬುರುವ ಅಕ್ಟೋಬರ್‌ನಲ್ಲಿ ಕೊಳ್ಳೇಗಾಲ ಲಯನ್ಸ್ ಕ್ಲಬ್ 50 ವರ್ಷ ಪೂರೈಸುತ್ತಿದ್ದು, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ ಎಂದು ಲಯನ್ಸ್ 2ನೇ ಉಪ ಜಿಲ್ಲಾ ಪ್ರಾಂತಪಾಲ ಎಂ.ಸಿದ್ದೇಗೌಡ ಹೇಳಿದರು.
ಪಟ್ಟಣದ ಲಯನ್ಸ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ಲಯನ್ಸ್ ಸಂಸ್ಥೆಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.
ಲಯನ್ಸ್ ಸಂಸ್ಥೆ ಉತ್ತಮ ಸೇವಾ ಸಂಸ್ಥೆಯಾಗಿದ್ದು, ಆರಂಭದಿಂದ ಈವರೆಗೂ ಸೇವಾ ಕಾರ್ಯದಿಂದಲೇ ಗುರುತಿಸಿಕೊಂಡಿದೆ. ಅಂಧತ್ವ ನಿವಾರಣೆ ಮಾಡುವ ಉದ್ದೇಶದಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರಗಳನ್ನು ನಡೆಸುತ್ತಿದೆ. ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು ಲಯನ್ಸ್ ಸಂಸ್ಥೆಯ ಉದ್ದೇಶವನ್ನು ಸಹಕಾರಗೊಳಿಸಬೇಕು ಎಂದರು.
ನೂತನ ಅಧ್ಯಕ್ಷ ಬಿ.ಎಂ.ಪುಟ್ಟಮಾದಪ್ಪ ಅಧಿಕಾರ ಸ್ವೀಕರಿಸಿ ಬಳಿಕ ಮಾತನಾಡಿ,ಸಂಸ್ಥೆಯ ಉದ್ದೇಶ ಸೇವೆ ಮತ್ತು ಸತ್ಸಂಗವಾಗಿದೆ. ಅನೇಕ ಕಾರ್ಯಕ್ರಮಗಳ ಜತೆಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದೇನೆ. ಲಯನ್ಸ್ ವಿದ್ಯಾ ಸಂಸ್ಥೆ ಎರಡು ಶಾಶ್ವತ ಯೋಜನೆಗಳಾದ ಲಯನ್ಸ್ ಕಣ್ಣಿನ ಆಸ್ಪತ್ರೆ ಮತ್ತು ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ಸಮಾಜಕ್ಕೆ ನೀಡುವುದು ಮತ್ತು ಅಂಧತ್ವ ನಿವಾರಣೆಗಾಗಿ ಕಣ್ಣಿನ ಆಸ್ಪತ್ರೆ ಮೂಲಕ ಬಡವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿಸಿ ನಡೆಸಿಕೊಡುವುದು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆ. ಸುತ್ತಮುತ್ತಲ ಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದರು.
ಪದಾಧಿಕಾರಿಗಳ ಪದಗ್ರಹಣ:
ಕಾರ್ಯಕ್ರಮದಲ್ಲಿ ಬಿ.ಎಂ.ಪುಟ್ಟಮಾದಪ್ಪ(ನೂತನ ಅಧ್ಯಕ್ಷರು), ಪಿ.ಮಾದೇಶ್(ನಿಕಟಪೂರ್ವ ಅಧ್ಯಕ್ಷರು), ಎಸ್.ನಾಗರಾಜು(ಕಾರ್ಯದರ್ಶಿ), ಜಿ.ಮಹೇಂದ್ರ ಮತ್ತು ಎನ್.ನವನೀತಗೌಡ(ಉಪಾಧ್ಯಕ್ಷರು, ಜೆ.ಹರ್ಷ (ಜಂಟಿ ಕಾರ್ಯದರ್ಶಿ), ಬಿ.ಎನ್.ವೀರೂಪಾಕ್ಷ ಸ್ವಾಮಿ(ಖಜಾಂಚಿ), ಎಂ.ಮಹದೇವಸ್ವಾಮಿ(ಆಡಳಿತಾಧಿಕಾರಿ), ಪಿ.ಮಹದೇವಸ್ವಾಮಿ(ಮೆಂಬರ್‌ಶಿಪ್ ಚೇರ‌್ಮೆನ್), ಓ.ವಿ.ಸತೀಶ್(ಕ್ಲಬ್ ಸರ್ವೀಸ್ ಛೇರ್ ಪರ‌್ಸನ್) ಜಿ.ಎಸ್.ಮಹದೇವಪ್ರಸಾದ್(ಕೋಆರ್ಡಿನೇಟರ್), ಪಿ.ಮಂಜುನಾಥ್(ಮಾರ್ಕೆಟಿಂಗ್ ಚೇರ್ ಪರ‌್ಸನ್), ಸಿ. ಚೆನ್ನಮಾದೇಗೌಡ, ಚಿಕ್ಕಬಸವಯ್ಯ, ಸಿ.ಬಿ.ಜಯಪ್ರಕಾಶ್, ಸಿ.ಚೇತನ್, ಆರ್, ವೆಂಕಟೇಶ್‌ಬಾಬು, ಕೆ.ಸಿ.ರಾಮಯ್ಯ, ಎನ್. ಸಂಜಯ್, ನಂಜುಂಡಸ್ವಾಮಿ, ಎಂ.ಚಂದ್ರಶೇಖರಮೂರ್ತಿ, ವಿ.ಚೇತನ್‌ಕುಮಾರ್, ಓ.ವಿ.ಸಚಿನ್ (ನಿರ್ದೇಶಕರು) ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ಕೋ ಆರ್ಡಿನೇಟರ್ ವಿಜಯ್‌ಕುಮಾರ್, ಆರ್.ಸಿ.ರಮೇಶ್ ಕುಮಾರ್, ಸಂಸ್ಥಾಪಕ ಕಾರ್ಯದರ್ಶಿ ಗಿರಿರಾಜನ್, ಸದಸ್ಯರಾದ ಜಗದೀಶ್‌ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net