ಕಣ್ಣಿನ ಉಚಿತ ತಪಾಸಣೆ ಶಿಬಿರ

ಕೊಳ್ಳೇಗಾಲದ ಲಯನ್ಸ್ ಕ್ಲಬ್‌ನಲ್ಲಿ ಭಾನುವಾರ ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಣ್ಣಿನ ತಪಾಸಣೆ ಶಿಬಿರಕ್ಕೆ ಲಯನ್ಸ್ ವೆಸ್ಟ್ ಐ ಆಸ್ಪತ್ರೆ ತಜ್ಞ ಡಾ.ಅನುರೂಪ್ ಚಾಲನೆ ನೀಡಿದರು. ಮಾದೇಶ್, ನಾಗರಾಜು ಕೊಂಗರಹಳ್ಳಿ, ಜಿ.ಎಸ್.ಮಹದೇವ ಪ್ರಸಾದ್, ಚಿಕ್ಕಬಸವಯ್ಯ,

Published on
ಕೊಳ್ಳೇಗಾಲ : ಪಟ್ಟಣದ ಲಯನ್ಸ್ ಕ್ಲಬ್‌ನಲ್ಲಿ ಭಾನುವಾರ ಲಯನ್ಸ್ ಸಂಸ್ಥೆ ವತಿಯಿಂದ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಲಯನ್ಸ್ ವೆಸ್ಟ್ ಐ ಆಸ್ಪತ್ರೆಯ ತಜ್ಞ ಡಾ.ಅನುರೂಪ್ ಮಾತನಾಡಿ, ಪ್ರತಿಯೊಬ್ಬರು ಕಣ್ಣಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಣ್ಣನ್ನ ಉಜ್ಜುವುದು, ತೀಡುವುದು ಮಾಡಬಾರದು ಆದಷ್ಟು ಹೊಗೆ, ಧೂಳಿನಿಂದ ದೂರವಿರಬೇಕು. ದಿನಕ್ಕೆ 3 ಬಾರಿ ಕಣ್ಣನ್ನು ತೊಳೆಯಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ 69 ಜನರನ್ನು ತಪಾಸಣೆ ಮಾಡಿ 39 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಇವರನ್ನು ಬೆಂಗಳೂರಿನ ಲಯನ್ಸ್ ಕ್ಲಬ್‌ನ ವೆಸ್ಟ್ ಐ ಹಾಸ್ಪಿಟಲ್‌ಗೆ ಕರೆದೊಯ್ದು ಉಚಿತ ಚಿಕಿತ್ಸೆ ಕೊಡಿಸಲಾಗುವುದು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೇಶ್, ಮಾಜಿ ಅಧ್ಯಕ್ಷರಾದ ನಾಗರಾಜು ಕೊಂಗರಹಳ್ಳಿ, ಜಿ.ಎಸ್. ಮಹದೇವ ಪ್ರಸಾದ್, ಚಿಕ್ಕಬಸವಯ್ಯ, ಸದಸ್ಯರಾದ ರಾಮಯ್ಯ, ನವನೀತ್ ಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net