ಬಹುಜನರಿಗಾಗಿ ಹೋರಾಡಿದ ಕಾನ್ಸಿರಾಂ

ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಕ್ಷದಿಂದ ಕಾನ್ಶಿರಾಂ  ಅವರ  92ನೇ  ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವಾಸು ಹೊಂಡರಬಾಳು, ಸಿದ್ದಯ್ಯನಪುರ ಎಸ್.ಪಿ.ಮಹೇಶ್, ದೇವಲಾಪುರ ಶಿವಣ್ಣ, ಗಾಳೀಪುರ ರಂಗಸ್ವಾಮಿ, ಬಾಬು ರಾಮಸಮುದ್ರ, ಅಮಚವಾಡಿ ಕಾಂತರಾಜು, ಸಿದ್ದರಾಜು ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಿಎಸ್ಪಿ ಮುಖಂಡ ವಾಸು ಹೊಂಡರಬಾಳು ಬಣ್ಣನೆ
  • ಕಾನ್ಶಿರಾಂ ಜಯಂತಿ ಪುಷ್ಪ ನಮನ ಸಲ್ಲಿಕೆ
  • ಬಹುಜನ ಚಳುವಳಿಯನ್ನು ಗಟ್ಟಿಗೊಳಿಸುವಂತೆ ಕರೆ
ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಕ್ಷದಿಂದ ಕಾನ್ಶಿರಾಂ ಅವರ 92ನೇ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವಾಸು ಹೊಂಡರಬಾಳು, ಸಿದ್ದಯ್ಯನಪುರ ಎಸ್.ಪಿ.ಮಹೇಶ್, ದೇವಲಾಪುರ ಶಿವಣ್ಣ, ಗಾಳೀಪುರ ರಂಗಸ್ವಾಮಿ, ಬಾಬು ರಾಮಸಮುದ್ರ, ಅಮಚವಾಡಿ ಕಾಂತರಾಜು, ಸಿದ್ದರಾಜು ಇತರರಿದ್ದರು.
ಚಾಮರಾಜನಗರ: ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಕಾನ್ಶಿರಾಮ್ ಅವರು ಸಮ ಸಮಾಜ ನಿರ್ಮಾಣದ ನಿರ್ಮಾತೃವಾಗಿದ್ದು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪ ಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ ಮಾಡಿದರು ಎಂದು ಬಿಎಸ್ಪಿ ಮುಖಂಡ ವಾಸು ಹೊಂಡರಬಾಳು ಬಣ್ಣಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಕ್ಷದಿಂದ ಕಾನ್ಶಿರಾಂ ಅವರ 92ನೇ ಜಯಂತಿಯ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಕಾನ್ಶಿರಾಂ ಅವರು ಸಂಘಟನೆಯ ಮೂಲಕ ಜನ ಜಾಗೃತಿ ಮೂಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತಗಳಿಂದ ಪ್ರೇರಿತರಾಗಿ ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿ ತರಲು ಪ್ರಯತ್ನಿಸಿದರು. ರಾಜಕೀಯ ಅಧಿಕಾರ ಬೇಕೆಂಬ ಉದ್ದೇಶವನ್ನು ಹೊಂದಿ 1984ರಲ್ಲಿ ಬಹುಜನ ಸಮಾಜ ಪಕ್ಷವನ್ನು ಸ್ಥಾಪನೆ ಮಾಡಿ ಉತ್ತರ ಪ್ರದೇಶದಲ್ಲಿ ಬಿಎಸ್ಪಿಯನ್ನು ಪ್ರಬಲವಾಗಿ ಸಂಘಟನೆ ಮಾಡಿದ್ದರು. ಇದರ ಫಲವಾಗಿ ಅಕ್ಕ ಮಾಯವತಿ ಅವರು ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾದರು ಎಂದು ವಿವರಿಸಿದರು.
ಕಾನ್ಶಿರಾಂ ಅವರು ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಂಡು ಅವರ ಹಾದಿಯಲ್ಲಿಯೇ ಸಾಗಬೇಕು. ಕರ್ನಾಟಕದಲ್ಲಿಯೂ ಸಹ ಬಿಎಸ್ಪಿಯನ್ನು ಪ್ರಬಲವಾಗಿ ಸಂಘಟಿಸುವ ರಾಜಕೀಯ ಅಧಿಕಾರನ್ನು ಪಡೆದುಕೊಳ್ಳುವ ಮೂಲಕ ಕಾನ್ಶಿರಾಂ ಅವರ ಕನಸು ನನಸು ಮಾಡುವ ದಿಕ್ಕಿನಲ್ಲಿ ಎಲ್ಲರು ಬಹುಜನ ಚಳವಳಿಯನ್ನು ಮುಂದುವರಿಸೋಣ ಎಂದರು.
ಮುಖಂಡರಾದ ಸಿದ್ದಯ್ಯನಪುರ ಎಸ್. ಪಿ.ಮಹೇಶ್, ದೇವಲಾಪುರ ಶಿವಣ್ಣ, ಟೌನ್ ಅಧ್ಯಕ್ಷ ಗಾಳೀಪುರ ರಂಗಸ್ವಾಮಿ, ಬಾಬು ರಾಮಸಮುದ್ರ, ಅಮಚವಾಡಿ ಕಾಂತರಾಜು, ಸಿದ್ದರಾಜು, ಛಲವಾದಿ ಮಹಾಸಭಾ ಮಾಜಿ ಅಧ್ಯಕ್ಷ ರಮೇಶ್, ಅಶೀತ್ ರಾಮಸಮುದ್ರ , ಮಧು ಮಹೇಶ, ಶಿವಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net