ತಾಲೂಕಿನ ಸತ್ತೇಗಾಲ ಗ್ರಾಮದ ಕೋಟೆ ಬೀದಿಯಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಕುರುಬನಟ್ಟೆ ಕಂಡಾಯಗಳ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಕೆ.ಎಸ್.ಮಂಟ್ಯ, ಲಿಂಗ ರಾಜು, ಕಾಳಯ್ಯ, ಶಾಂತರಾಜು ಇತರರಿದ್ದರು.
ಕೊಳ್ಳೇಗಾಲ:ತಾಲೂಕಿನ ಸತ್ತೇಗಾಲ ಗ್ರಾಮದ ಕೋಟೆ ಬೀದಿಯಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಕುರುಬನಟ್ಟೆ ಕಂಡಾಯಗಳ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಸತ್ತೇಗಾಲ ಗ್ರಾಮಕ್ಕೆ ಸೋಮವಾರ ಸಂಜೆ ಆಗಮಿಸಿದ ಕರುಬನಕಟ್ಟೆ ಮಠದ ಕಂಡಾಯಗಳನ್ನು ಶಿವನ ಸಮುದ್ರದ ಆದಿ ಶಕ್ತಿ ಮಾರಮ್ಮನ ದೇವಾಲಯದಲ್ಲಿ ಇರಿಸಲಾಯಿತು. ಬಳಿಕ ಕಾವೇರಿ ನದಿಯಲ್ಲಿ ಕಂಡಾಯಗಳಿಗೆ ಹೂ, ಹೊಂಬಾಳೆ ಧರಸಿ ಪೂಜೆ ಸಲ್ಲಿಸಲಾಯಿತು. ನಂತರ ಕೋಟೆ ಬೀದಿಗೆ ಪ್ರವೇಶಿಸಿ ಕಂಡಾಯಗಳನ್ನು ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ಇರಿಸಲಾಯಿತು. ಮಂಗಳವಾರ ಕಂಡಾಯಗಳಿಗೆ ಪೂಜೆ ಸಲ್ಲಿಸಿ ಬಡಾವಣೆ ಪ್ರತಿ ಬೀದಿಯಲ್ಲೂ ಮಂಗಳ ವಾದ್ಯದ ಇಮ್ಮೇಳದಲ್ಲಿ ಮೆರವಣಿಗೆ ಮಾಡಲಾಯಿತು.
ಮುಖಂಡರಾದ ಸತ್ತೇಗಾಲ ಯಜಮಾನರಾದ ಕೆ.ಎಸ್.ಮಂಟ್ಯ, ಲಿಂಗ ರಾಜು, ಕಾಳಯ್ಯ, ಶಾಂತರಾಜು, ನಂಜುಂಡ, ನಂಜುಂಡಸ್ವಾಮಿ, ಶಿವು, ಭೂತಯ್ಯ ಇತರರು ಇದ್ದರು.