ಕಂಡಾಯ ಉತ್ಸವ

  ಕೊಳ್ಳೇಗಾಲದ ಲಿಂಗಣಾಪುರ ಬಡಾವಣೆಯಲ್ಲಿ ಸೋಮವಾರ ವೀರಶೈವ ಲಿಂಗಾಯತ ಸಮುದಾಯ ವತಿಯಿಂದ ಶ್ರೀ ಕ್ಷೇತ್ರ ಕುರುಬನಕಟ್ಟೆ ಕಂಡಾಯ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಕೊಳ್ಳೇಗಾಲದ ಲಿಂಗಣಾಪುರ ಬಡಾವಣೆಯಲ್ಲಿ ಸೋಮವಾರ ವೀರಶೈವ ಲಿಂಗಾಯತ ಸಮುದಾಯ ವತಿಯಿಂದ ಶ್ರೀ ಕ್ಷೇತ್ರ ಕುರುಬನಕಟ್ಟೆ ಕಂಡಾಯ ಉತ್ಸವ ವಿಜೃಂಭಣೆಯಿಂದ ನೆರವೇರಿತು.
Published on
ಕೊಳ್ಳೇಗಾಲ : ಪಟ್ಟಣದ ಲಿಂಗಣಾಪುರ ಬಡಾವಣೆಯಲ್ಲಿ ಸೋಮವಾರ ವೀರಶೈವ ಲಿಂಗಾಯತ ಸಮುದಾಯ ವತಿಯಿಂದ ಶ್ರೀ ಕ್ಷೇತ್ರ ಕುರುಬನಕಟ್ಟೆ ಕಂಡಾಯ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಭಾನುವಾರ ಗ್ರಾಮಕ್ಕೆ ಪ್ರವೇಶಿಸಿದ ಕಂಡಾಯಗಳನ್ನು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಇರಿಸಲಾಗಿತ್ತು. ಬೆಳಗ್ಗೆ ಬಡಾವಣೆಯ ಹೊರವಲಯದಲ್ಲಿ ಬುಕಾರಿ ಕಟ್ಟೆಯಲ್ಲಿ ಕಂಡಾಯಗಳನ್ನು ಶುಚಿಗೊಳಿಸಿ ಹೂವು, ಹೊಂಬಾಳೆ ಧರಿಸಿ ಅಲಂಕರಿಸಲಾಯಿತು. ಬಳಿಕ ಕಂಡಾಯಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ನೀಲಗಾರರು ಪೂಜೆ ಸಲ್ಲಿಸಿದರು. ನಂತರ, ಮಂಗಳವಾದ್ಯ ಹಿಮ್ಮೇಳದಲ್ಲಿ ಕಂಡಾಯಗಳನ್ನು ದೇವರು ಗುಡ್ಡರು ಹೊತ್ತು ಗ್ರಾಮದೊಳಗೆ ಪ್ರವೇಶ ಮಾಡಿದರು. ಮೆರವಣಿಗೆ ವೇಳೆ ನಿವಾಸಿಗಳು ಹೂವು, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ಕಂಡಾಯೋತ್ಸವ ಹಿನ್ನಲೆ ಬಡಾವಣೆಯಲ್ಲಿ ಹಸಿರು-ತೋರಣ ಹಾಗೂ ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿತ್ತು.
ಉತ್ಸವದಲ್ಲಿ ಲಿಂಗಣಾಪುರದ ಅನಿಲ್‌ಕುಮಾರ್ ಗೌಡರು, ಶಿವಪ್ಪ ಗೌಡರು, ನಗರಸಭೆ ಮಾಜಿ ಸದಸ್ಯ ರಾಮಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷ ಜಿ.ಸೆಲ್ವರಾಜು, ಬಿಜೆಪಿ ಮುಖಂಡ ಬಸವರಾಜಪ್ಪ, ಕುಮಾರಸ್ವಾಮಿ, ಪುಟ್ಟಣ್ಣ, ನಾಗರಾಜು, ಜಗದೀಶ್, ಮಧುಸೂದನ್, ಶಾಂತರಾಜು, ದೊಡ್ಡಿ ಮಹದೇವ, ಗುರು, ರೇಚಣ್ಣ, ಪ್ರಭುಸ್ವಾಮಿ, ಲೋಕೇಶ್, ರಂಜನ್ ಕುಮಾರ್ ಬಡಾವಣೆಯ ಯುವಕರು ಮತ್ತು ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net