ಮಂಗಲ ಗ್ರಾಮದಲ್ಲಿ ಕನಕದಾಸ ಜಯಂತಿ ಆಚರಣೆ

ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ  ಮೆರವಣಿಗೆ ನಡೆಸುವುದರ ಮೂಲಕ ಕನಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಿಣಜೇಗೌಡ, ಜಾನಿ, ಮಲ್ಲೇಶ್, ಗಣೇಶ್, ಸಿದ್ದರಾಮು ಇತರರು ಇದ್ದರು.
ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ಮೆರವಣಿಗೆ ನಡೆಸುವುದರ ಮೂಲಕ ಕನಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಿಣಜೇಗೌಡ, ಜಾನಿ, ಮಲ್ಲೇಶ್, ಗಣೇಶ್, ಸಿದ್ದರಾಮು ಇತರರು ಇದ್ದರು.
Published on
ಹನೂರು: ತಾಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ಕನಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾವಚಿತ್ರವನ್ನು ಮೆರವಣಿಗೆ ನಡೆಸುವುದರ ಮೂಲಕ ಕನಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಜಯಂತಿಯ ಅಂಗವಾಗಿ ಗ್ರಾಮದ ಶ್ರೀ ಕೋಣನ ಮಾರಮ್ಮನ ದೇಗುಲದ ಬಳಿ ಕನಕದಾಸರ ಭಾವಚಿತ್ರಕ್ಕೆ ಸಮುದಾಯದ ಮುಖಂಡರು ವಿಶೇಷ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಬಳಿಕ ಗೂಡ್ಸ್ ವಾಹನದಲ್ಲಿ ಭಾವಚಿತ್ರವನ್ನು ಇರಿಸಿ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೋಣನ ಮಾರಮ್ಮನ ದೇಗುಲದಿಂದ ಹೊರಟ ಮೆರವಣಗೆಯು ಬೂದುಬಾಳು ಮುಖ್ಯ ರಸ್ತೆ, ರಂಗದಮಾಳ ಬೀದಿ ಹಾಗೂ ಕುರುಬರ ಬೀದಿಗಳಲ್ಲಿ ಸಂಚರಿಸಿತು.
ಈ ವೇಳೆ ಯುವಕರು ಕನಕದಾಸರ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ಮೂಲಕ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂಘದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಮುದಾಯದ ಯಜಮಾನರಾದ ಮಿಣಜೇಗೌಡ, ಕೆಂಪರಾಜು, ಮಾದೇಗೌಡ, ದೊಡ್ಡೇಗೌಡ, ಯುವ ಮುಖಂಡರಾದ ಜಾನಿ, ಮಲ್ಲೇಶ್, ಗಣೇಶ್, ಸಿದ್ದರಾಮು, ಶಿವರಾಜು ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net