ಶಾಲೆಯ ಆವರಣದಲ್ಲಿ 4 ಕೊಠಡಿಗಳ ಮೇಲೆ ಅಳವಡಿಸಿರುವ ಮರದ ಪಟ್ಟಿಗಳು ಹಳೆಯದಾಗಿದ್ದು, ಅಲ್ಲಲ್ಲಿ ಮುರಿದುಹೋಗಿವೆ. ಮರದ ಪಟ್ಟಿಗಳ ಮೇಲೆ ಹೆಂಚನ್ನು ಕೂರಿಸಲಾಗಿದೆ. ಹಲವು ವರ್ಷಗಳ ಹಿಂದೆ ಇದೇ ರೀತಿ ತರಗತಿ ನಡೆಯುತ್ತಿದ್ದಾಗಲೇ ಮೇಲಿಂದ ಮರದ ಪಟ್ಟಿ ಕೆಳಗೆ ಕಳಚಿಕೊಂಡು ಬಿದ್ದಿತ್ತು. ವಿದ್ಯಾರ್ಥಿಯೊಬ್ಬನ ತಲೆಗೆ ಗಾಯವಾಗಿತ್ತು ಎಂದು ಹಳೆಯ ವಿದ್ಯಾರ್ಥಿಗಳು ನೆನಪು ಮಾಡಿಕೊಳ್ಳುತ್ತಾರೆ. ಮಳೆ ಬಂದರೆ ಒಂದೆರಡು ಕೊಠಡಿಗಳ ಒಳಗೆ ಹನಿ ಬೀಳುತ್ತದೆ. ಗಾಳಿ, ಮಳೆ ಜೋರಾದರೆ ಛಾವಣಿ ಯಾವ ಸಂದರ್ಭದಲ್ಲಿ ಬೇಕಾದರೂ ಮಕ್ಕಳ ಮೇಲೆ ಬೀಳಬಹುದು.