ಕಾಗಲವಾಡಿಯಿಂದ ಜ್ಯೋತಿಗೌಡನಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಕಾಗಲವಾಡಿ ಮೋಳೆ, ಅಮ್ಮನಪುರ, ನಲ್ಲೂರು ಮೋಳೆ, ಕರುಳಮೋಳೆ ಹಾಗೂ ಇನ್ನಿತರೆ ಗ್ರಾಮಗಳ ಸಾವಿರಾರು ಜನರು ನಿತ್ಯವೂ ವಿವಿಧ ವಾಹನಗಳಲ್ಲಿ ಸಂಚಾರ ಮಾಡುತ್ತಾರೆ. ಈ ಗ್ರಾಮಗಳಿಗೆ ಸೂಕ್ತ ರೀತಿಯಲ್ಲಿ ಸಾರಿಗೆ ಸೌಲಭ್ಯವಿಲ್ಲದೇ ಇರುವುದರಿಂದ ಹೆಚ್ಚಿನ ಜನರು ದ್ವಿಚಕ್ರವಾಹನಗಳನ್ನೇ ಅವಲಂಬಿಸಿದ್ದಾರೆ. ಅದಲ್ಲದೇ ನಿತ್ಯವೂ ನೀರಾರು ವಿದ್ಯಾರ್ಥಿಗಳು ಈರಸ್ತೆಯಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುತ್ತಾರೆ. ಈ ಗ್ರಾಮಗಳ ಜನರು ಕಾಗಲವಾಡಿ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದು, ನಿತ್ಯವೂ ಸಾರ್ವಜನಿಕರು ಬರುತ್ತಾರೆ. ಹೊಲ-ಜಮೀನುಗಳಿಗೆ ಸಂಚಾರ ಮಾಡುವ ರೈತಾಪಿವರ್ಗದ ಜನರಿಗೆ ಈ ರಸ್ತೆಯೊಂದೆ ಆಧಾರವಾಗಿದೆ.