ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸಲಾಗುವುದು

ಬಿದರಹಳ್ಳಿಯಲ್ಲಿ ಆಯೋಜಿಸಿದ್ಧ ಶ್ರದ್ಧಾಂಜಲಿ ಸಭೆಯಲ್ಲಿ ದಸಂಸ ರಾಜ್ಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿದರು. ನದಿಯಾ, ರಾಮಲಿಂಗಂ, ಷಣ್ಮುಗಂ, ಮಣಿ ಇತರರು ಇದ್ದರು.
ಬಿದರಹಳ್ಳಿಯಲ್ಲಿ ಆಯೋಜಿಸಿದ್ಧ ಶ್ರದ್ಧಾಂಜಲಿ ಸಭೆಯಲ್ಲಿ ದಸಂಸ ರಾಜ್ಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿದರು. ನದಿಯಾ, ರಾಮಲಿಂಗಂ, ಷಣ್ಮುಗಂ, ಮಣಿ ಇತರರು ಇದ್ದರು.
Published on

ದಸಂಸ ಮುಖಂಡ ದೊಡ್ಡಿಂದುವಾಡಿ ಸಿದ್ದರಾಜು ಭರವಸೆ

ಹನೂರು: ಸುಳವಾಡಿ ವಿಷ ಪ್ರಸಾದ ಸೇವನೆ ದುರಂತ ಪ್ರಕರಣದ ನೊಂದ ಕುಟುಂಬಗಳಿಗೆ ಸಂಘಟನೆಯ ಮೂಲಕ ನ್ಯಾಯ ದೊರಕಿಸಿ ಕೊಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ತಿಳಿಸಿದರು.
ತಾಲೂಕಿನ ಬಿದರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಳವಾಡಿ ವಿಷ ಪ್ರಸಾದ ಸೇವನೆ ದುರಂತದಲ್ಲಿ ಮೃತಪಟ್ಟವರಿಗೆ ಭಾನುವಾರ ಆಯೋಜಿಸಿದ್ಧ 7ನೇ ವರ್ಷದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಈ ದುರಂತ ಪ್ರಕರಣದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡ ಕುಟುಂಬದ ಸದಸ್ಯರು ತುಂಬಾ ಸಂಕಷ್ಟದಲ್ಲಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸರ್ಕಾರ ನೀಡಿದ್ದ ಭರವಸೆ 7 ವರ್ಷ ಕಳೆದರೂ ಈಡೇರಿಲ್ಲ. ಈ ಸಂಬಂಧ ಡಿಸಿ ಹಾಗೂ ಎಸಿ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿ, ಎಸ್ಟು ಕುಂದು ಕೊರತೆ ಸಭೆಯಲ್ಲಿ ಹಲವು ಬಾರಿ ಗಮನಕ್ಕೆ ತರಲಾಗಿದೆ. ಇದೀಗ ಶಾಸಕರು ಅಗತ್ಯ ಭರವಸೆ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಸಂತ್ರಸ್ತರಿಗೆ ಸವಲತ್ತು ದೊರಕುವ ಭರವಸೆ ಇದೆ. ನೊಂದವರಿಗೆ ಹೋರಾಟ ಮೂಲಕ ನ್ಯಾಯ ಕೊಡಿಸುವಲ್ಲಿ ಸಂಘಟನೆ ಯಾವಾಗಲೂ ನಿಮ್ಮ ಜತೆ ಇರುತ್ತದೆ. ಯಾವುದೇ ಕಾರಣಕ್ಕೂ ಎದೆಗುಂದುವ ಅವಶ್ಯಕತೆ ಇಲ್ಲ. ಬದಲಾಗಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬರೂ ಸಂಘಟಿತರಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ಮೃತಪಟ್ಟವರಿಗೆ ಪುಷ್ಪನಮನ ಸಲ್ಲಿಸಿ ಮೌನಾಚರಿಸುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಗ್ರಾಪಂ ಉಪಾಧ್ಯಕ್ಷೆ ನದಿಯಾ, ಸದಸ್ಯರಾದ ರಾಮಲಿಂಗಂ, ಸುರೇಶ್, ಬಾಲಯ್ಯ, ದಸಂಸ ತಾಲೂಕು ಸಂಚಾಲಕ, ಮಾದೇಶ್, ಜಡೇಯಪ್ಪ, ಮುರುಗೇಶ್, ಮುಖಂಡರಾದ ಷಣ್ಮುಗಂ, ಮಣಿ, ಸಂಪತ್, ಚಿನ್ನಮ್ಮ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net