ಗಾರೆ ಕೆಲಸದ ಮೇಸ್ತ್ರಿ ವೃತ್ತಿ ಮಾಡುತ್ತಿರುವ ಜಯಪ್ಪ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು. 101 ಗ್ರಾಂ ಚಿನ್ನಾಭರಣ, ಬೆಳ್ಳಿ ಪದಾರ್ಥಗಳು ಸೇರಿದಂತೆ 80 ಸಾವಿರ ರೂ. ಹಣ ಕಳವಾಗಿದೆ. ಜಯಪ್ಪ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕಾರಣ ಆದರ್ಶ ನಗರದ ಮನೆಗೆ ಬೀಗ ಜಡಿದು ಭೀಮನಗರದಲ್ಲಿರುವ ತಮ್ಮ ಹಳೆಯ ಮನೆಗೆ ಜು.6 ರಂದು ತೆರಳಿದ್ದರು. ಬಳಿಕ ಜು.10ರಂದು ಮನಗೆ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆ ಬಾಗಿಲು ಒಡೆದು ಬೆಡ್ ರೂಮ್ ವಾರ್ಡ್ರೋಬ್‌ನಲ್ಲಿದ್ದ ಚಿನ್ನಾಭರಣ, ಬೆಳ್ಳಿ ಪದಾರ್ಥ, ನಗದು ಹಣವನ್ನು ದೋಚಿದ್ದಾರೆ ಎಂದು ಜಯಪ್ಪ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.