ಯಳಂದೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರಿಗೆ ಸೋಮವಾರ ಸಂಘದ ಕಚೇರಿಯಲ್ಲಿ ಅಭಿನಂದಿಸಲಾಯಿತು.ಎಸ್.ಎಲ್. ನಯನಾ, ಮಹೇಶ್, ಗೌಡಹಳ್ಳಿ ಎಸ್.ರವಿ ಇತರರಿದ್ದರು.
Published on:
Copied
Follow Us
ಯಳಂದೂರು: ಯಳಂದೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆ.ಯೋಗೇಶ್ ಉಪಾಧ್ಯಕ್ಷರಾಗಿ ಕೊಮಾರನಪುರ ಪುಟ್ಟರಾಜು ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಈ ಸಂಬಂಧ ಪಟ್ಟಣದಲ್ಲಿರುವ ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿ ನೇತೃತ್ವದಲ್ಲಿ ಚುನಾವಣೆ ನಡೆಸಲಾಯಿತು. ಇವೆರಡೂ ಸ್ಥಾನಕ್ಕೂ ಒಬ್ಬೊಬ್ಬರೆ ನಾಮಪತ್ರವನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇವರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷ ಜೆ.ಯೋಗೇಶ್ ಮಾತನಾಡಿ, ಇದೊಂದು ತಾಲೂಕಿನ ಲಾಭದಾಯಕ ಸಂಘವಾಗಿದ್ದು, ಇದರ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ದುಡಿಯುತ್ತೇನೆ. ಎಲ್ಲರ ಅಭಿಪ್ರಾಯಕ್ಕೂ ನಾನು ಮನ್ನಣೆ ನೀಡಿ ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು.
ಉಪಾಧ್ಯಕ್ಷ ಕೊಮಾರನಪುರ ಪುಟ್ಟರಾಜು ಮಾತನಾಡಿ, ಸಂಘದ ಅಭಿವೃದ್ಧಿಗೆ ತುಂಬಾ ಜಾಗರೂಕತೆಯಿಂದ ಎಲ್ಲ ಸದಸ್ಯರ ಸಹಯೋಗದೊಂದಿಗೆ ಪ್ರಮಾಣಿಕತೆ ಯಿಂದ ಕೆಲಸ ಮಾಡುತ್ತೆನೆ ಎಂದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ತಹಸೀಲ್ದಾರ್ ಎಸ್.ಎಲ್. ನಯನಾ ಪ್ರಮಾಣಪತ್ರವನ್ನು ವಿತರಿಸಿದರು.
ನಿರ್ದೇಶಕರಾದ ಮಹೇಶ್, ಗೌಡಹಳ್ಳಿ ಎಸ್.ರವಿ, ಎಂ.ಸಿ. ಶ್ರೀಕಂಠಮೂರ್ತಿ, ಆರ್. ರಾಜೇಶ್, ಸಿದ್ಧಶೆಟ್ಟಿ, ಪರಶಿವಮೂರ್ತಿ, ವೈ.ಎನ್. ಚೇತನ್‌ಕುಮಾರ್, ಪುಟ್ಟಚಾಮಮ್ಮ, ಮಹದೇವಮ್ಮ, ಸಿ. ನಂಜುಂಡಸ್ವಾಮಿ ಕಾರ್ಯದರ್ಶಿ ರಮೇಶ್ ಸೇರಿದಂತೆ ಅನೇಕರು ಇದ್ದರು.