ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಗೆ ಡಿಸಿ ಕಾರ್ಯಾಲಯಕ್ಕೆ ನಿರಂತರವಾಗಿ ದೂರು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಈ ಸಂಬಂದ ಚರ್ಚಿಸಲು ಸಂಬಂಧಪಟ್ಟವರು ಮತ್ತು ಅಧಿಕಾರಿಗಳನ್ನು ಕರೆಯಲಾಗಿತ್ತು. ಗುಂಡ್ಲುಪೇಟೆಯ ಹಿರಿಕಾಟಿ ಗ್ರಾಮದ ಸರ್ವೆ ನಂ.209ರ ಜಮೀನಿನ ಮಾಲೀಕರಿಗೆ ವ್ಯವಸಾಯ ಉದ್ದೇಶಕ್ಕೆದಾರಿ ಬಿಡದೆ ತೊಂದರೆ ನೀಡುತ್ತಿರುವುದು, ಚಾಮರಾಜನಗರ ತಾಲೂಕಿನ ಯರಗನಹಳ್ಳಿ ಗ್ರಾಮದ ಸರ್ವೆ ನಂ.254, 255, 253 ಇತರೆ ಜಮೀನುಗಳನ್ನು ಅಕ್ರಮವಾಗಿ ಖಾತೆ ಮಾಡಿರುವುದು, ವಡ್ಗಲ್‌ಪುರ ಗ್ರಾಮದ ಸರ್ವೆ ನಂ.32ರಲ್ಲಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಗಣಿಗಾರಿಕೆ ನಡೆಸುತ್ತಿರುವುದು, ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಜನರಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿರುವ ಸಂಬಂಧ ದೂರು ಸಲ್ಲಿಸುವುದು, ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೆ ಕಳಪೆ ಬೇಳೆ ಪೂರೈಸುತ್ತಿರುವುದು ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿರುವುದು, 2016-17ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಚಾಮರಾಜನಗರ ಪಟ್ಟಣದ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ೋಷಿಸಿರುವ ಅನುದಾನದಡಿಯಲ್ಲಿನ ಕಾಮಗಾರಿಗಳನ್ನು ಅವ್ಯವಹಾರ ನಡೆಸಿರುವ ದೂರುಗಳು ಕಾರ್ಯಾಲಯಕ್ಕೆ ಬಂದಿದ್ದವು. ಈ ವಿಷಯ ಸೂಚಿಯನ್ನು ಇಟ್ಟುಕೊಂಡು ಡಿಸಿ ಶ್ರೀರೂಪಾ ದೂರುದಾರರನ್ನು ಕರೆಸಿ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ನಡೆಸಿದರು.