ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರಂ ಮಾತನಾಡಿ, ತಾಲೂಕಿನ ಜನತೆಗೆ ಸುಸಜ್ಜಿತ ಆರೋಗ್ಯ ಸೇವೆ ನೀಡುವ ಸಲುವಾಗಿ ತೆರೆದಿರುವ ಅತ್ಯಾಧುನಿಕ ಫಿಜಿಯೋಥೆರಪಿ ವಿಭಾಗದಲ್ಲಿ ರೋಗಿಗಳ ತ್ವರಿತ ಚೇತರಿಕೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಅಳವಡಿಸಲಾಗಿದೆ. ಇದು ಸ್ನಾಯು ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ದಂತ ವೈದ್ಯಕೀಯ ವಿಭಾಗದಲ್ಲಿ ಸೆನ್ಸರ್ ಆಧರಿತ ಆಧುನಿಕ ಡಿಜಿಟಲ್ ಉಪಕರಣ ಅಳವಡಿಸಲಾಗಿದ್ದು, ಇದು ಕಡಿಮೆ ವಿಕಿರಣದೊಂದಿಗೆ ಹಲ್ಲುಗಳ ನಿಖರವಾದ ಎಕ್ಸ್‌ರೇ ಚಿತ್ರಗಳನ್ನು ತಕ್ಷಣವೇ ನೀಡುತ್ತದೆ. ಇದರಿಂದ ಚಿಕಿತ್ಸೆ ಇನ್ನಷ್ಟು ಸುಲಭ ಮತ್ತು ವೇಗವಾಗಲಿದೆ ಎಂದರು.