ಶ್ರೀ ಮಧ್ಯರಂಗನಾಥ ಸ್ವಾಮಿ ದೇವಸ್ಥಾನ ಕಾಮಗಾರಿ ಪರಿಶೀಲನೆ

ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿರುವ ಶ್ರೀ ಮಧ್ಯ ರಂಗನಾಥಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ  ಕಾಮಗಾರಿಯನ್ನು ಜಿಲ್ಲಾಧಿಕಾರಿ ಶ್ರೀರೂಪಾ ಪರಿಶೀಲಿಸಿದರು. ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು, ಶಿವನಸಮುದ್ರ ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಶ್ರೀರೂಪಾರಿಂದ ವೀಕ್ಷಣೆ
ಕೊಳ್ಳೇಗಾಲ: ಲೋಕಾಯುಕ್ತ ಪ್ರಕರಣ ಹಿನ್ನೆಲೆ ಜಿಲ್ಲಾಧಿಕಾರಿ ಶ್ರೀರೂಪಾ ಮಂಗಳವಾರ ಪಟ್ಟಣದ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಹೊಸ ಹಂಪಾಪುರ ಸಮೀಪದ ಸ.ನಂ 868ನಲ್ಲಿರುವ ರಸ್ತೆ ಸ್ಥಳ ಮತ್ತು ಇಂದಿರಾ ಕಾಲನಿಯಲ್ಲಿರುವ ಸ.ನಂ 808 ಸ್ಥಳವನ್ನು ಖುದ್ದು ವೀಕ್ಷಣೆ ಮಾಡಿದರು. ಈ ವೇಳೆ ಆರ್‌ಐ ನಿರಂಜನ್, ಗ್ರಾಮ ಲೆಕ್ಕಿಗ ರಾಕೇಶ್ ಮರಾಠ್ ಅವರಿಂದ ಮಾಹಿತಿ ಪಡೆದರು. ನಂತರ, ಶಿವನಸಮುದ್ರ ಗ್ರಾಮದಲ್ಲಿರುವ ಶ್ರೀ ಮಧ್ಯರಂಗನಾಥ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಪರಿಶೀಲಿಸಿದರು. ದೇವಾಲಯ ಮುಂಭಾಗದಲ್ಲಿರುವ ಹಳೇ ಕಟ್ಟಡಗಳನ್ನು ತೆರವುಗೊಳಿಸಿ ಪಾರ್ಕಿಂಗ್ ಸ್ಥಳ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು, ಶಿವನಸಮುದ್ರ ಸಮೂಹ ದೇವಾಲಯಗಳ ಇಒ ಸುರೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net