ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ಹನೂರಿನ ಬಂಡಳ್ಳಿ ಮುಖ್ಯ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ವಿಜಯಕುಮಾರ್, ಚಿನ್ನವೆಂಕಟ, ರಾಜು ಇತರರಿದ್ದರು.
ಹನೂರಿನ ಬಂಡಳ್ಳಿ ಮುಖ್ಯ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ವಿಜಯಕುಮಾರ್, ಚಿನ್ನವೆಂಕಟ, ರಾಜು ಇತರರಿದ್ದರು.
Published on
ಹನೂರು: ಗುಣಮಟ್ಟದೊಂದಿಗೆ ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.
ಪಟ್ಟಣದಲ್ಲಿ ಕೈಗೊಂಡಿರುವ ಬಂಡಳ್ಳಿ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭಾನುವಾರ ತೆರಳಿ ಪರಿಶೀಲಿಸಿ ಮಾತನಾಡಿದರು.
ಈ ರಸ್ತೆಯ ಹೆಚ್ಚು ಜನರು ಹಾಗೂ ವಾಹನಗಳು ಸಂಚರಿಸುವ ಮಾರ್ಗವಾಗಿದೆ. ಆದರೆ ಹಲವು ದಶಕದ ಹಿಂದೆ ನಿರ್ಮಿಸಿದ ಈ ರಸ್ತೆಯು ಸಂಪೂರ್ಣ ಹಾಳಾಗಿತ್ತು. ಇದರಿಂದ ಸಾರ್ವಜನಿಕರು ಅದರಲ್ಲೂ ಪಟ್ಟಣದ ಜನತೆ ಸಂಚರಿಸಲು ತುಂಬ ತೊಂದರೆ ಅನುಭವಿಸುತ್ತಿದ್ದರು. ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಇದನ್ನು ಮನಗಂಡು ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಂಚಾರಕ್ಕೆ ಸಮಸ್ಯೆಯಾಗದಂತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹುಬ್ಬೆಹುಣಸೆ ಕೆರೆಗೆ ಭೇಟಿ, ಪರಿಶೀಲನೆ: ಬಳಿಕ ಸಮೀಪದ ಉದ್ದನೂರು ಬಳಿಯ ಹುಬ್ಬೆಹುಣಸೆ ಕೆರೆಗೆ ಭೇಟಿ ನೀಡಿದ ಶಾಸಕರು, ಹೂಳು ತೆಗೆಯುವುದನ್ನು ಪರಿಶೀಲಿಸಿ ಮಾತನಾಡಿದರು. ಈ ಭಾಗದ ರೈತರ ಬಹು ದಿನಗಳ ಬೇಡಿಕೆಯಾದ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕೆರೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೂಳು ತೆಗೆದು ಸದುಪಯೋಗ ಪಡಿಸಿಕೊಳ್ಳಲು ರೈತರಿಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಹೂಳು ಕೊಂಡೊಯ್ಯುವ ವೇಳೆ ಯಾರಾದರೂ ರೈತರನ್ನು ಅಡ್ಡಿಪಡಿಸಿದ್ದಲ್ಲಿ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು. ಹಾಗೆಯೇ ಕೆರೆಯ ಅಭಿವೃದ್ಧಿಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಮುಖಂಡರಾದ ವಿಜಯಕುಮಾರ್, ಚಿನ್ನವೆಂಕಟ, ಉದ್ದನೂರು ಗಿರೀಶ್, ಡಿ.ಕೆ.ರಾಜು, ಪ್ರಮೋದ್, ಸಾವುಕಯ್ಯ, ಮಹದೇವ, ಶಿವಕುಮಾರ್, ಕಿಶೋರ್, ರಾಕೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net