ಅಕ್ರಮವಾಗಿ ಲಾಟರಿ ಮಾರಾಟ, ಮದ್ಯ ಮಾರಾಟವೂ ಕೂಡ ಹೆಚ್ಚಿನ ರೀತಿಯಲ್ಲಿ ನಡೆಯುತ್ತಿದೆ. ಈ ಮಧ್ಯೆ ಪಡಿತರ ಅಕ್ಕಿ ದಂಧೆಯೂ ಕೂಡ ಹೆಚ್ಚಿದ್ದು, ಬೇಗೂರು ಪೊಲೀಸರು ಅಕ್ರಮವಾಗಿ ಅಕ್ಕಿ ಸಾಗಣೆ ಮಾಡುತ್ತಿದ್ದವರನ್ನು ಬಂಧಿಸಿ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದರೂ ಪ್ರಕರಣ ದಾಖಲಿಸಿಲ್ಲ. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಬಾರದೆ ತೊಂದರೆಯಾಗುತ್ತಿದೆ. ಗುಂಡ್ಲುಪೇಟೆಯಲ್ಲಿ ಆಂಬುಲೆನ್ಸ್ ಸಮಸ್ಯೆ ಇರುವ ಸಂಬಂಧ ಸಾರ್ವಜನಿಕರು ಸರ್ಕಾರ ಮತ್ತು ಶಾಸಕರ ಗಮನಕ್ಕೆ ತಂದರೂ ಇಲ್ಲಿಯ ತನಕ ಒಂದೂ ಅಂಬುಲೆನ್ಸ್ ಕೂಡ ತಾಲೂಕಿಗೆ ಬಂದಿಲ್ಲ. ಗುಂಡ್ಲುಪೇಟೆ ತಾಲೂಕು ಆಸ್ಪತ್ರೆ, ಕಬ್ಬಹಳ್ಳಿ ಆಸ್ಪತ್ರೆ, ಬೇಗೂರು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದರು ಕೂಡ ಬಗೆಹರಿಸಿಲ್ಲ. ಆಡಳಿತ ಸಂಪೂರ್ಣವಾಗಿ ಕುಸಿದಿದ್ದರೂ ಶಾಸಕ ಗಣೇಶ್ ಪ್ರಸಾದ್ ಇತ್ತ ಗಮನ ನೀಡದೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.