ಫೆಬ್ರವರಿ 13ರಂದು ತಾಳುಬೆಟ್ಟದ ಮಾರ್ಗದಲ್ಲಿ ಸಾರಿಗೆ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಚಾಲಕರಾದ ಫಕೀರಪ್ಪ, ಚಂದ್ರಶೇಖರ, ನಿರ್ವಾಹಕ ವೆಂಕಟೇಶ್, ರಾಮನಗರದ ದತ್ತರಾಜು, ಸ್ವಾಮಿ, ಅಭಿಷೇಕ್ ಹಾಗೂ ತಲಕಾಡಿನ ತಳವಾರ್ ಗಾಯಗೊಂಡಿದ್ದರು. 15ರಂದು ಮಲ್ಲಯ್ಯನಪುರದ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಕನಕಪುರದ ಕಾರ್ತಿಕ್, ತೇಜಸ್, ಮಾರ್ಚ್ 3 ರಂದು ಹನೂರಿನ ಅಗ್ನಿಶಾಮಕ ಠಾಣಾ ಬಳಿ ಕಾರು ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿ ಮಂಗಲ ಗ್ರಾಮದ ದೊರೆ, ಏ.29 ರಂದು ವಡಕೆಹಳ್ಳದ ಬಳಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಕೋಣನಕೆರೆಯ ವಿಜಯ್, ದೊರೆ, ಮೇ 1ರಂದು ಎಲ್ಲೇಮಾಳದ ಬಳಿ ಕಾರು ಹಳ್ಳಕ್ಕೆ ಬಿದ್ದು ಬೆಂಗಳೂರಿನ ಇಬ್ಬರು ಗಾಯಗೊಂಡಿದ್ದರೆ, ಇದೇ ದಿನ ತಾಳುಬೆಟ್ಟದ 2ನೇ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮಗುಚಿ ಹನೂರು, ಎಚ್.ಡಿ ಕೋಟೆ, ಮೈಸೂರು ಹಾಗೂ ನಂಜನಗೂಡಿನ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 12ರಂದು ಕೋಣನಕೆರೆ ತಾಳುಬೆಟ್ಟದ ಮಾರ್ಗದಲ್ಲಿ ಕಾರು ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿ ಮೈಸೂರು ಕೂರ್ಗಳ್ಳಿಯ ಅರುಣ್, ಪವನ್, ಯಶಸ್, 14ರಂದು ಎಲ್ಲೇಮಾಳ ಮಾರ್ಗದಲ್ಲಿ ಲಾರಿ ಮಗುಚಿ ಚಾಲಕ ಗಾಯಗೊಂಡಿದ್ದಾರೆ. ರಾಮಾಪುರ ಮಾರ್ಗದ ಕೆಂಪಯ್ಯನಹಟ್ಟಿ ಬಳಿ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು ಒಡೆಯರಪಾಳ್ಯದ 9 ಜನರು ಗಾಯಗೊಂಡಿದ್ದರು.