ವಿದ್ಯುತ್ ಸಂಬಂಧಿತ ದೂರುಗಳಿಗೆ ತಕ್ಷಣ ಕ್ರಮ

 ಚಾಮರಾಜನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಸಾರ್ವಜನಿಕರ ದೂರುಗಳನ್ನು ಆಲಿಸಿದರು. ಸಿ.ಎಸ್.ಪ್ರವೀಣ್, ಚಂದ್ರನಾಯ್ಕ, ಮಹದೇವಸ್ವಾಮಿ, ಮಂಜುನಾತ್, ಮಂಜು ಹಾಜರಿದ್ದರು.
ಚಾಮರಾಜನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಸಾರ್ವಜನಿಕರ ದೂರುಗಳನ್ನು ಆಲಿಸಿದರು. ಸಿ.ಎಸ್.ಪ್ರವೀಣ್, ಚಂದ್ರನಾಯ್ಕ, ಮಹದೇವಸ್ವಾಮಿ, ಮಂಜುನಾತ್, ಮಂಜು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಭರವಸೆ
  • ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ದೂರು ಸ್ವೀಕಾರ
ಚಾಮರಾಜನಗರ: ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ವಿದ್ಯುತ್ ಸಂಬಂಧಿತ ದೂರುಗಳನ್ನು ತಿಳಿಸಿದರು.
ಸಭೆಯಲ್ಲಿ ನಗರದ ಬುದ್ಧ ನಗರ ಹಾಗೂ ಹೌಸಿಂಗ್‌ಬೋರ್ಡ್‌ನಲ್ಲಿ ವಿದ್ಯುತ್ ತಂತಿಗೆ ಮರದ ರಂಬೆ - ಕೊಂಬೆಗಳು ತಗಲುತ್ತಿದೆ ಎಂದು ಬುದ್ಧ ನಗರದ ನಿವಾಸಿ ಭಾನುಪ್ರಕಾಶ್ ತಿಳಿಸಿದರು. ಮರ ಕತ್ತರಿಸಲು ಅರಣ್ಯ ಇಲಾಖೆಯವರು ಲೈನ್ ಬಿಚ್ಚುವಂತೆ ತಿಳಿಸಿದ್ದಾರೆ. ಆದರೂ ಕ್ರಮವಹಿಸಿಲ್ಲ ಕೊಂಬೆ ತಲೆ ಮೇಲೆ ಬಿದ್ದು ಜೀವ ಹಾನಿಯಾದರೆ ಯಾರು ಹೊಣೆ. ಆದ್ದರಿಂದ ಪಾರ್ಕ್ ಹತ್ತಿರ ಇರುವ ಎರಡು ಮರವನ್ನು ತೆಗೆಯಬೇಕೆಂದು ತಿಳಿಸಿದರು.
ಸೋಮವಾರಪೇಟೆಯ ರಾಜೇಂದ್ರ ಎಂಬುವರು ಮಾತನಾಡಿ ತಮಗೆ 32,000 ರೂ.ಬಿಲ್ ಬಂದಿದೆ. ಇದನ್ನು ಸರಿಪಡಿಸಬೇಕು ಎಂದು ತಿಳಿಸಿದರೆ, ಕುಂಬೇಶ್ವರ ಕಾಲನಿಯ ರಮೇಶ್ ಮಾತನಾಡಿ, ನಾನು ಗಂಗಾ ಕಲ್ಯಾಣ ಯೋಜನೆ ಫಲಾನುಭವಿಯಾಗಿದ್ದು, ಈ ಭಾಗದಲ್ಲಿ ಒಂದು ಟಿಸಿ ಸಹ ಇಲ್ಲ. ಇದಕ್ಕೆ ಅಗತ್ಯ ಕ್ರಮಕ್ಕಾಗಿ ವಹಿಸಬೇಕೆಂದು ಕೋರಿದರು.
ನಗರಸಭೆ ಮಾಜಿ ಸದಸ್ಯ ರಾಮಸಮುದ್ರ ನಾಗರಾಜ್ ಮಾತನಾಡಿ, ರಾಮಸಮುದ್ರದಲ್ಲಿ ಪದೇ ಪದೇ ಕರೆಂಟ್ ಹೋಗುತ್ತಿದೆ. ಪಟ್ಟಣದ ಬೀದಿಗಳಲ್ಲಿ ಬೆಳಗ್ಗೆ ವೇಳೆಯೂ ಲೈಟ್‌ಗಳು ಉರಿಯುತ್ತಿರುತ್ತವೆ ಎಂದು ತಿಳಿಸಿದರು. ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಮಾತನಾಡಿ, ಕೂಡಲೇ ಶಿಥಿಲಾವಸ್ಥೆಯಲ್ಲಿರುವ ಮರಗಳನ್ನು ತೆರವುಗೊಳಿಸಲಾಗುವುದು. ವಿದ್ಯುತ್ ಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳ ಬಗ್ಗೆ ದೂರು ಬಂದರು , ಕೂಡಲೇ ಕ್ರಮ ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಸಹಾಯಕ ಇಂಜಿನಿಯರ್ ಸಿ.ಎಸ್.ಪ್ರವೀಣ್, ಯೂನಿಯನ್ ಇಂಜಿನಿಯರ್‌ಗಳಾದ ಚಂದ್ರನಾಯ್ಕ, ಮಹದೇವಸ್ವಾಮಿ, ಮಂಜುನಾಥ್, ಹಿರಿಯ ಸಹಾಯಕ ಮಂಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net