ರಾಜ್ಯದ ರೈತರ ಅಭಿವೃದ್ಧಿಗೆ ಶ್ರಮಿಸುವೆ

 ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವೀರಸಿಂಹಾಸನ ಶಿಲಾಮಠದ ನೂತನ ಕಟ್ಟಡ ಉದ್ಘಾಟನೆ ಮತ್ತು ಶ್ರೀಸಿದ್ದಮಲ್ಲಿಕಾರ್ಜುನ ಸ್ವಾಮೀಜಿಯ ಆರಾಧನೆ ಕಾರ್ಯಕ್ರಮವನ್ನು ಶ್ರೀಸಿದ್ದಮಲ್ಲ ಸ್ವಾಮೀಜಿ ಉದ್ಘಾಟಿಸಿದರು. ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿ.ಎಸ್.ಯಡಿಯೂರಪ್ಪ, ಮಲ್ಲಿಕಾರ್ಜುನಪ್ಪ, ಮಧುಶಂಕರ್ ಇತರರು ಇದ್ದರು.
ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವೀರಸಿಂಹಾಸನ ಶಿಲಾಮಠದ ನೂತನ ಕಟ್ಟಡ ಉದ್ಘಾಟನೆ ಮತ್ತು ಶ್ರೀಸಿದ್ದಮಲ್ಲಿಕಾರ್ಜುನ ಸ್ವಾಮೀಜಿಯ ಆರಾಧನೆ ಕಾರ್ಯಕ್ರಮವನ್ನು ಶ್ರೀಸಿದ್ದಮಲ್ಲ ಸ್ವಾಮೀಜಿ ಉದ್ಘಾಟಿಸಿದರು. ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿ.ಎಸ್.ಯಡಿಯೂರಪ್ಪ, ಮಲ್ಲಿಕಾರ್ಜುನಪ್ಪ, ಮಧುಶಂಕರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ
  • ರಾಷ್ಟ್ರೀಯತೆ, ಹಿಂದೂ ಸಮಾಜದ ರಕ್ಷಣೆ ಇಂದಿನ ಅಗತ್ಯ
  • ವೀರಸಿಂಹಾಸನ ಶಿಲಾಮಠದ ನೂತನ ಕಟ್ಟಡ ಉದ್ಘಾಟನೆ, ಶ್ರೀಸಿದ್ದಮಲ್ಲಿಕಾರ್ಜುನ ಸ್ವಾಮೀಜಿಯ 76ನೇ
  • ವಾರ್ಷಿಕ ಆರಾಧನೆ ಕಾರ್ಯಕ್ರಮ
ಗುಂಡ್ಲುಪೇಟೆ: ಜನರ ನಿರೀಕ್ಷೆಯಂತೆ ಕೈ ಕಾಲು ಗಟ್ಟಿಯಾಗಿರುವವರೆಗೂ ನಾಡಿನ ಉದ್ದಗಲಕ್ಕೂ ಓಡಾಡಿ ರಾಜ್ಯದ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲೂಕಿನ ಸೋಮಹಳ್ಳಿ ಗ್ರಾಮದ ವೀರಸಿಂಹಾಸನ ಶಿಲಾಮಠದ ನೂತನ ಕಟ್ಟಡ ಉದ್ಘಾಟನೆ ಮತ್ತು ಸಿದ್ದಮಲ್ಲಿಕಾರ್ಜುನ ಸ್ವಾಮೀಜಿಯ 76ನೇ ವಾರ್ಷಿಕ ಆರಾಧನೆ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ತಂದ ಭಾಗ್ಯಲಕ್ಷ್ಮೀ ಯೋಜನೆ ಹೆಣ್ಣು ಮಕ್ಕಳು ನೆಮ್ಮದಿಯಿಂದ ಬದುಕಲು ಕಾರಣವಾಗಿದೆ. ಬಸವಣ್ಣ ಹೇಳಿದಂತೆ ಧರ್ಮ ಉಳಿಸುವ ಸಲುವಾಗಿ ಸುಮಾರು 800 ವಷರ್ಗಳ ಇತಿಹಾಸವಿರುವ ಸೋಮಹಳ್ಳಿ ಶ್ರೀಮಠದ ಅಭಿವೃದ್ಧಿಗೆ 1.70 ಲಕ್ಷ ರೂ. ಅನುದಾನ ನೀಡಿದ್ದೆ. ಮಠಗಳನ್ನು ಉಳಿಸುವ ಕೆಲಸ ಗುರುಗಳದ್ದು. ಮುಂದಿನ ಭವಿಷ್ಯಕ್ಕಾಗಿ ಧರ್ಮ ಉಳಿಯಬೇಕು. ಯಾವುದೇ ಜಾತಿ, ಮತ, ಭೇದವಿಲ್ಲದೆ ಬದುಕುವುದೇ ಲಿಂಗಾಯತ ಧರ್ಮದ ಆಶಯವಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಒಂದಾಗಿ ಬಾಳಬೇಕು. ಧರ್ಮ ಮಾರ್ಗದಲ್ಲಿ ನಡೆದರೆ ನಾವೆಲ್ಲರೂ ಸುರಕ್ಷಿತವಾಗಿರಬಹುದು ಎಂದರು.
ಭಾರತ ದೇಶ ಯೋಗ ಮತ್ತು ತ್ಯಾಗ ಪ್ರತೀಕವಾಗಿದೆ. ರಾಮ-ಕೃಷ್ಣ- ಶಿವನ ತಪೋಭೂಮಿಯಾಗಿದ್ದು ವಿದೇಶಿಯರು ಸಹ ಕೊಂಡಾಡುವ ಪುಣ್ಯಭೂಮಿಯಾಗಿದೆ. ರಾಷ್ಟ್ರೀಯತೆ ಹಾಗೂ ಹಿಂದೂ ಸಮಾಜದ ರಕ್ಷಣೆ ಇಂದಿನ ಅಗತ್ಯವಾಗಿದೆ. ಯಾವುದೇ ಸರ್ಕಾರಗಳು ರೈತ ಸಮುದಾಯ ನೆಮ್ಮದಿಯಿಂದ ಬದುಕಲು ಶ್ರಮಿಸಬೇಕು. ಇಡೀ ದೇಶಕ್ಕೆ ಮಾರ್ಗದರ್ಶನ ನೀಡ್ತಾ ಇರೋ ನರೇಂದ್ರ ಮೋದಿ ಸಿಕ್ಕಿರೋದು ನಮ್ಮ ಪುಣ್ಯ ಎಂದರು.
ಗುಂಡ್ಲುಪೇಟೆ ಭಾಗದ ಕೆರೆ ನೀರು ತುಂಬಿಸಲು ನಿರ್ಲಕ್ಷ್ಯ ಮಾಡುತ್ತಿರುವ ವಿಚಾರದ ಬಗ್ಗೆ ಸರ್ಕಾರದ ಜತೆಗೆ ಮಾತನಾಡುತ್ತೇನೆ. ಆದಷ್ಟು ಬೇಗ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಸೋಮಹಳ್ಳಿ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಗಣೇಶ್‌ಪ್ರಸಾದ್, ಮಾಜಿ ಶಾಸಕ ನಿರಂಜನಕುಮಾರ್, ಎಸ್.ಬಾಲರಾಜು, ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್, ಮಧುಶಂಕರ್, ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಕೆ.ಆರ್.ಎ.ಡಿ.ಎಲ್. ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಜಿ.ಪಂ. ಮಾಜಿ ಅಧ್ಯಕ್ಷ ನಾಗೇಂದ್ರ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಮರಹಳ್ಳಿ ರವಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಶಿವನಾಗಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net