ಮಾನವೀಯ ಕಾರ್ಯಗಳು ಅವಿಸ್ಮರಣೀಯ

ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೋಟರಿ ಸಂಸ್ಥೆ, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೃತಕ ಕೈ-ಕಾಲು ಉಚಿತ ಜೋಡಣೆ ಶಿಬಿರವನ್ನು ಜಿಲ್ಲಾಧಿಕಾರಿ ಶ್ರೀರೂಪಾ ಉದ್ಘಾಟನೆ ಮಾಡಿದರು. ಕಾಗಲವಾಡಿ ಚಂದ್ರು, ಸೋಮಶೇಖರ್, ರಾಮಕೃಷ್ಣ ಇದ್ದರು.
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೋಟರಿ ಸಂಸ್ಥೆ, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೃತಕ ಕೈ-ಕಾಲು ಉಚಿತ ಜೋಡಣೆ ಶಿಬಿರವನ್ನು ಜಿಲ್ಲಾಧಿಕಾರಿ ಶ್ರೀರೂಪಾ ಉದ್ಘಾಟನೆ ಮಾಡಿದರು. ಕಾಗಲವಾಡಿ ಚಂದ್ರು, ಸೋಮಶೇಖರ್, ರಾಮಕೃಷ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಶ್ರೀರೂಪಾ ಅಭಿಮತ
  • ರೋಟರಿ ಸಂಸ್ಥೆಯಿಂದ ಕೃತಕ ಕೈ-ಕಾಲು ಉಚಿತ ಜೋಡಣೆ ಶಿಬಿರ
ಚಾಮರಾಜನಗರ: ಸಮಾಜದ ದುರ್ಬಲ ವರ್ಗಗಳಿಗೆ ನೆರವಾಗುವುದು, ಅಂಗವಿಕಲರಿಗೆ ಸಹಾಯ ಮಾಡುವ ಮಾನವೀಯ ಕಾರ್ಯಗಳು ಅವಿಸ್ಮರಣೀಯ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಹೇಳಿದರು.
ನಗರದ ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೋಟರಿ ಸಂಸ್ಥೆ, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೃತಕ ಕೈ-ಕಾಲು ಉಚಿತ ಜೋಡಣೆ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಅಭಿವೃದ್ಧಿ ಎಂದರೆ ರಸ್ತೆ, ಕಟ್ಟಡಗಳ ನಿರ್ಮಾಣ ಮಾತ್ರವಲ್ಲ. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯೂ ಮುಖ್ಯವಾಗುತ್ತದೆ. ಅದರಲ್ಲೂ ದುರ್ಬಲ ವರ್ಗಗಳಿಗೆ ನಾವು ಹೇಗೆ ಸಹಾಯ ಮಾಡುತ್ತೇವೆ ಎನ್ನುವುದು ಮಹತ್ವ ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದುರ್ಬಲರಿಗೆ ನೆರವು ನೀಡುವ ಅಗತ್ಯವಿದೆ. ಅಂಗವಿಕಲರಿಗೆ ನೀಡುವ ನೆರವು ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಈ ನಿಟ್ಟಿನಲ್ಲಿ ಅಂಗವಿಕಲರಿಗೆ ಕೃತಕ ಕೈ-ಕಾಲುಗಳನ್ನು ಉಚಿತವಾಗಿ ಜೋಡಣೆ ಮಾಡಿಕೊಡುತ್ತಿರುವುದು ಅವಿಸ್ಮರಣೀಯ ವಿಚಾರ. ಇದರಿಂದಾಗಿ ನ್ಯೂನ್ಯತೆಗಳಿದ್ದ ಅಂಗವಿಕಲರಿಗೆ ಹೊಸ ಜೀವನ ಸಿಗುತ್ತದೆ. ಬದುಕಿನಲ್ಲಿ ಭವಿಷ್ಯದ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಆತ್ಮ ವಿಶ್ವಾಸ ವೃದ್ಧಿಯಾಗುತ್ತದೆ. ಅಂಗವಿಕರಲ್ಲಿ ಜೀವನ ಚೈತನ್ಯ ನೀಡುವ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದುಕೊಂಡಿವೆ ಎಂದು ಹೇಳಿದರು.
ರೋಟರಿ ಸಂಸ್ಥೆ ಮಾನವೀಯ ಕಾರ್ಯಗಳನ್ನು ಮಾಡುವುದರಲ್ಲಿ ಸದಾಕಾಲ ಮುಂದಿದೆ. ಅಂಗವಿಕಲರಿಗೆ ಕೃತಕ ಕೈ-ಕಾಲು ಜೋಡಣೆ ಮಾಡುವ ಮಹತ್ಕಾರ್ಯವನ್ನು 300ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಲಾಗಿದೆ ಎನ್ನಲಾಗಿದೆ. ಈ ಕಾರ್ಯಕ್ರಮಗಳ ಸಂಖ್ಯೆ 300ರಿಂದ 3 ಸಾವಿರವಾಗಲಿ. ನಾನೂ ಸಹ ಇದರ ಭಾಗವಾಗಿ ಇರುವುದಕ್ಕೆ ಸಂತೋಷ ವ್ಯಕ್ತಪಡಿಸುತ್ತೇನೆ. ಇಂತಹ ಕಾರ್ಯಕ್ರಮಗಳು ಜಿಲ್ಲಾಡಳಿತದ ವತಿಯಿಂದ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ರೋಟರಿ ಸಂಸ್ಥೆಯಿಂದ ಕಣ್ಣಿನ ತಪಾಸಣೆ ಶಿಬಿರ, ಶಸಚಿಕಿತ್ಸೆ, ನಿರ್ಗತಿಕರಿಗೆ 3 ಮನೆ ನಿರ್ಮಾಣ, ರಕ್ತದಾನ ಶಿಬಿರ, ಡಯಾಲಿಸಿಸ್ ಸೆಂಟರ್, ಬಸ್ ನಿಲ್ದಾಣ, ಅಂಗನವಾಡಿ ಕೊಠಡಿಗಳ ನಿರ್ಮಾಣ, ಆರೋಗ್ಯ ತಪಾಸಣೆ ಶಿಬಿರ, ಪಲ್ಸ್ ಪೋಲಿಯೋ ಕಾರ್ಯಕ್ರಮ, ಕಂಪ್ಯೂಟರ್ ವಿತರಣೆ, ಮಹಿಳೆಯರ ಸಬಲೀಕರಣಕ್ಕೆ ಹೊಲಿಗೆ ಯಂತ್ರಗಳು, ಬಡವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು ಸೇರಿದಂತೆ ನನ್ನ ಅವಧಿಯ 300ನೇ ಕಾರ್ಯಕ್ರಮವಾಗಿ ಕೃತಕ ಕೈ-ಕಾಲು ಉಚಿತ ಜೋಡಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗೌರ್ನರ್ ಡಾ.ನಾಗಾರ್ಜುನ್ ಮಾತನಾಡಿ, ರೋಟರಿ ಸಂಸ್ಥೆಯಿಂದ ಸುಸಜ್ಜಿತವಾದ ಕಣ್ಣಿನ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಕೊಂಡಿದ್ದೇವೆ. ಜಿಲ್ಲಾಡಳಿತದಿಂದ ಜಾಗ ನೀಡಿದರೆ ಆಸ್ಪತ್ರೆ ಕಟ್ಟಿಸಿ, ಬೇಕಾದ ಸಕಲರಣೆಗಳನ್ನು ಇಡುತ್ತೇವೆ. ಜಿಲ್ಲೆಯ ಜನರು ಬೇರೆ ಕಡೆಗೆ ಹೋಗದಂತೆ ಮಾಡುತ್ತೇವೆ. ಇದಕ್ಕೆ ಜಿಲ್ಲಾಡಳಿತ ಸಹಕಾರ ನೀಡಬೇಕೆಂದು ಕೋರಿದರು.
ಜನರು ಡಯಾಲಿಸಿಸ್‌ಗೆ ಹೋಗದಂತೆ ತಡೆಯಲು ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು. ಈ ಸಂಬಂಧ ಮುಂದಿನ ವರ್ಷ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಪ್ರತಿ ತಿಂಗಳ ಮೊದಲ ಭಾನುವಾರ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಈ ವರ್ಷ 3915 ಜನ ಶಿಬಿರಕ್ಕೆ ಬಂದಿದ್ದಾರೆ. ಇದರಲ್ಲಿ 1810 ಜನರಿಗೆ ಶಸಚಿಕಿತ್ಸೆಗಳಾಗಿವೆ. ಇದುವರೆಗೂ 15 ಸಾವಿರ ಜನರು ತಪಾಸಣೆ ಮಾಡಿಸಿಕೊಂಡಿದ್ದಾರೆ. 7053 ಶಸಚಿಕಿತ್ಸೆಗಳಾಗಿವೆ ಎಂದು ವಿವರಿಸಿದರು. ಇದೇ ವೇಳೆ ಸಮಾಜ ಸೇವಕ ರಾಮು ಅವರು ರೋಟರಿ ಸಂಸ್ಥೆಗೆ ದೇಣಿಗೆ ನೀಡಿದರು. ರೋಟರಿ ಸಂಸ್ಥೆಯ ರಾಮಕೃಷ್ಣ, ಸೋಮಶೇಖರ್ ಇದ್ದರು.
ಕೃತಕ ಕೈ-ಕಾಲು ಜೋಡಣೆ ಸಂತಸ:
ರೋಟರಿ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಹಿಂದಿನ ವರ್ಷ ಬೇರೆ ಜಿಲ್ಲೆಯಲ್ಲಿ ನಡೆದಿದ್ದ ಕೃತಕ ಕೈ-ಕಾಲು ಉಚಿತ ಜೋಡಣೆ ಶಿಬಿರ ಆಯೋಜನೆ ಮಾಡಿದ್ದನ್ನು ನೋಡಿ ನಮ್ಮ ಜಿಲ್ಲೆಯಲ್ಲೂ ಇಂತಹ ಕಾರ್ಯಕ್ರಮ ನಡೆಯಬೇಕು ಎಂದುಕೊಂಡಿದ್ದೆ. ನನ್ನ ಮನಸ್ಸಿನ ಭಾವನೆಯಂತೆ ಚಾಮರಾಜನಗರ ಜಿಲ್ಲೆಯಲ್ಲೂ ಶಿಬಿರವನ್ನು ಹಮ್ಮಿಕೊಂಡಿರುವುದು ಖುಷಿಯಾಯಿತು ಎಂದು ಲಾನುಭವಿ ನಿರಂಜನ್ ತಿಳಿಸಿದರು. ಶಿಬಿರದ ಕುರಿತು ಲಾನುಭವಿಗಳು ಮಾತನಾಡಿ, ಅಂಗವಿಕಲರಿಗೆ ಉಚಿತವಾಗಿ ಕೃತಕ ಕೈ-ಕಾಲು ನೀಡುತ್ತಿರುವುದು ತುಂಬಾ ಸಂತೋಷದ ವಿಚಾರ. ಹಣ ಕೊಟ್ಟು ಖರೀದಿ ಮಾಡಲು ಆಗದ ಸಕಲರಣೆಗಳನ್ನು ಉಚಿತವಾಗಿ ನೀಡಿರುವುದರಿಂದ ಆರ್ಥಿಕವಾಗಿಯೂ ಸಹಾಯವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net