ಸಂತೆಮರಹಳ್ಳಿಯಲ್ಲಿ ಭಾರಿ ಗಾತ್ರದ ಹೆಬ್ಬಾವು ರಕ್ಷಣೆ

 ಯಳಂದೂರು ಸಮೀಪದ ಸಂತೆಮರಹಳ್ಳಿ ಕಬಿನಿ ಕಾಲುವೆಯಲ್ಲಿ ಗುರುವಾರ ಕಂಡು ಬಂದ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದಿರುವುದು.
ಯಳಂದೂರು ಸಮೀಪದ ಸಂತೆಮರಹಳ್ಳಿ ಕಬಿನಿ ಕಾಲುವೆಯಲ್ಲಿ ಗುರುವಾರ ಕಂಡು ಬಂದ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಉರಗ ತಜ್ಞ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದು ಸಂರಕ್ಷಿಸಿದ್ದಾರೆ.
ಯಳಂದೂರು: ಸಮೀಪದ ಸಂತೆಮರಹಳ್ಳಿ ಗ್ರಾಮದ ಕಬಿನಿ ಕಾಲುವೆ ಬಳಿ ಗುರುವಾರ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದು ಸಂರಕ್ಷಿಸಿದ್ದಾರೆ.
ಬಸವಟ್ಟಿ ಗ್ರಾಮದ ಬರ್ನಾಲ್ಡ್ ದೀಕ್ಷಿತ್ ಮಾಹಿತಿ ಆಧರಿಸಿ ಸ್ನೇಕ್ ಮಂಜು ಜತೆ ಕಡಿದಾದ ಕಾಲುವೆಗೆ ಇಳಿದು ಸುರಕ್ಷಿತವಾಗಿ ಹಿಡಿದಿದ್ದಾರೆ. ಹೆಬ್ಬಾವು ದಟ್ಟ ಕಾಡಿನಲ್ಲಿ ಕಾಣಸಿಗುತ್ತದೆ. ಆದರೆ 6 ತಿಂಗಳ ಹಿಂದೆಯೂ ಸಮೀಪದ ಕಾವುದವಾಡಿ ಬಾಳೆ ತೋಟದಲ್ಲಿ ಈ ಪ್ರಭೇದದ ಹಾವು ಸಿಕ್ಕಿತ್ತು. ಇದು ಕಾಲುವೆ ನೀರಿನ ಮೂಲಕ ಬಂದಿರುವ ಸಂಶಯವಿದೆ. ಸಾಮಾನ್ಯವಾಗಿ ಬಯಲು ಪ್ರದೇಶದಲ್ಲಿ ಆವಾಸ ಇರುವುದಿಲ್ಲ. ಈ ಹೆಬ್ಬಾವಿನ ಸಂತತಿ ಕಡಿಮೆಯಾಗುತ್ತಿದ್ದು ಯಾರೇ ಕಂಡರೂ ಸಾಯಿಸಬಾರದು. ಇದನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ ಸಂರಕ್ಷಿಸಿರುವ ಹೆಬ್ಬಾವನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸಮೀಪದ ಬಿಳಿಗಿರಿರಂಗನಬೆಟ್ಟದ ಕಾಡಿಗೆ ಬಿಡಲಾಗುವುದು ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net