ಕೊಳ್ಳೇಗಾಲದ ಖಾಸಗಿ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಎಪಿಎಸ್ ದೇವೇಂದ್ರ ಗುಪ್ತ ದತ್ತಿ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಎ.ಡಿ ಶಿವಪ್ರಕಾಶ್, ಗೌರಿ ಪ್ರಕಾಶ್, ವಿಜಯ ಕುಮಾರ್, ಬಿ.ಕೆ ರವಿಕುಮಾರ್, ಎಸ್.ನಾಗರಾಜು ಕೊಂಗರಹಳ್ಳಿ ಮತ್ತಿತರಿದ್ದರು.
ಕೊಳ್ಳೇಗಾಲ : ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಎಪಿಎಸ್ ಜ್ಯುವೆಲರ್ಸ್ ಮಾಲೀಕ ಎ.ಡಿ.ಶಿವಪ್ರಕಾಶ್ ತಿಳಿಸಿದರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಸೋಮವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್
ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಲಿಂಗೈಕ್ಯ ಎಪಿಎಸ್ ದೇವೇಂದ್ರ ಗುಪ್ತ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣರ ಆದರ್ಶಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಂಡರೆ ಶಾಂತಿ ಮತ್ತು ನೆಮ್ಮದಿ ಜೀವನ ನಮ್ಮದಾಗುತ್ತದೆ ಎಂದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, ಶರಣರ ಚಿಂತನೆ ಸಕಲ ಜೀವರಾಶಿಗೂ ಒಳಿತನ್ನೇ ಬಯಸಿದೆ. ಬಸವಾದಿ ಶರಣರ ಸಾಹಿತ್ಯ ಮತ್ತು ಸಂದೇಶ ನಮಗೆ ದಾರಿ ದೀಪವಾಗಿದೆ. ನಾವೆಲ್ಲರೂ ಶರಣರ ಆಶಯದಂತೆ ಬದುಕಬೇಕು ಎಂದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಕೆ ರವಿಕುಮಾರ್ ಮಾತನಾಡಿ, ಬಸವಣ್ಣ ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣರು ಸರಳ ಕನ್ನಡದಲ್ಲಿ ಸಾವಿರಾರು ವಚನಗಳನ್ನು ರಚಿಸಿದ್ದಾರೆ. ಈ ವಚನಗಳ ಸಾರ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ
ಎಂದು ತಿಳಿಸಿದರು. ಇದೇ ಸಂದರ್ಭ ಪೌರಕಾರ್ಮಿಕರಾದ ವೆಂಕಟೇಶ್ ಮತ್ತು ರಂಗ ಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪರಿಷತ್ತಿನ ತಾಲೂಕು ಕಾರ್ಯದರ್ಶಿ ಶಿವಕುಮಾರ್ ಮೂರ್ತಿ, ನಿರ್ದೇಶಕ ಶಿವಸ್ವಾಮಿ, ಖಜಾಂಚಿ ಜಿ.ಎಸ್. ಮಹದೇವ ಪ್ರಸಾದ್, ಗೌರಿ ಪ್ರಕಾಶ್, ವಿಜಯ ಕುಮಾರ್ ಇದ್ದರು.