ಹಿಂದೂ ಸಮಾಜದ ಏಕತೆ, ಸಂಸ್ಕೃತಿ ಹಾಗೂ ಧಾರ್ಮಿಕ ಜಾಗೃತಿಗೆ ಮಹತ್ವದ ವೇದಿಕೆ

 ಹನೂರಿನಲಿ ನಂದೀಶ ಶಿವಚಾರ್ಯ ಸ್ವಾಮಿ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ವೃಷಬೇಂದ್ರಸ್ವಾಮಿ, ಶ್ಯಾಮ್ ಭಟ್, ಮಹೇಂದ್ರ, ರಮೇಶ್‌ನಾಯ್ಡು ಇತರರಿದ್ದರು.
ಹನೂರಿನಲಿ ನಂದೀಶ ಶಿವಚಾರ್ಯ ಸ್ವಾಮಿ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ವೃಷಬೇಂದ್ರಸ್ವಾಮಿ, ಶ್ಯಾಮ್ ಭಟ್, ಮಹೇಂದ್ರ, ರಮೇಶ್‌ನಾಯ್ಡು ಇತರರಿದ್ದರು.
Published on
ಹನೂರು : ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯಿಂದ ಭಾನುವಾರ ಹಿಂದೂ ಸಮಾಜೋತ್ಸವವನ್ನು ಆಚರಿಸಲಾಯಿತು.
ಪಟ್ಟಣದ ಆರ್‌ಎಂಸಿ ಬಳಿ ಅಜ್ಜೀಪುರ ಮಠದ ನಂದೀಶ ಶಿಚಾಚಾರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ನೆರೆದಿದ್ದ ನೂರಾರು ಹಿಂದೂ ಕಾರ್ಯಕರ್ತರು ಧರ್ಮ ಸಂಸ್ಕೃತಿಯ ಬಗ್ಗೆ ಘೋಷಣೆ ಕೂಗುತ್ತ ಆರ್.ಎಸ್ ದೊಡ್ಡಿವರೆಗೂ ಮೆರವಣಿಗೆ ನಡೆಸಿದರು. ಈ ವೇಳೆ ವಾದ್ಯಮೇಳ ಹಾಗೂ ವೀರಗಾಸೆ ನೃತ್ಯದ ತಂಡದೊಂದಿಗೆ ಮಹಿಳೆಯರು ಕುಂಭ ಕಳಸ ಹೊತ್ತು ಸಾಗಿದರು.
ಬಿಜೆಪಿ ಮಂಡಲ ಅಧ್ಯಕ್ಷ ಕೆ.ಪಿ.ವೃಷಭೇಂದ್ರಸ್ವಾಮಿ ಮಾತನಾಡಿ, ಹಿಂದು ಸಮಾಜೋತ್ಸವವು ಹಿಂದೂ ಸಮಾಜದ ಏಕತೆ, ಸಂಸ್ಕೃತಿ ಹಾಗೂ ಧಾರ್ಮಿಕ ಜಾಗೃತಿಗೆ ಮಹತ್ವದ ವೇದಿಕೆಯಾಗಿದ್ದು, ಸಾಮಾಜಿಕ ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಬಲಪಡಿಸುತ್ತದೆ. ಜತೆಗೆ ಏಕತೆ, ಶಾಂತಿ ಹಾಗೂ ಧಾರ್ಮಿಕ ಗೌರವವನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಪ್ರಮುಖರಾದ ಶ್ಯಾಮ್ ಭಟ್, ಮಹೇಂದ್ರ, ಪ್ರವೀಣ್, ವೇಣು, ರಮೇಶ್‌ನಾಯ್ಡು, ಶಿವಸ್ವಾಮಿ, ಮೂರ್ತಿ, ಶಿವಕುಮಾರಸ್ವಾಮಿ, ನಂಜುಂಡಸ್ವಾಮಿ, ಶಿವಲಿಂಗಪ್ಪ ಮಹದೇವಸ್ವಾಮಿ, ಬಸವಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net