ಪುರಾಣದಲ್ಲಿ ಕಮಲಾಚಲ, ಗೋವರ್ಧನಗಿರಿ, ಕಂಜಗಿರಿ, ಕಮಲಾಚಲ, ಬೆಟ್ಟದಕೋಟೆ, ಮೂಡಣಕೋಟೆ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಬೆಟ್ಟದ ಸುತ್ತಲೂ ಪೂರ್ವದಲ್ಲಿ ತ್ರಿಯಂಭಕಾದ್ರಿ, ಪಶ್ಚಿಮದಲ್ಲಿ ನೀಲಾದ್ರಿ, ಉತ್ತರದಲ್ಲಿ ಮಂಗಳಾದ್ರಿ, ಆಗ್ನೇಯದಲ್ಲಿ ಹಂಸಾದ್ರಿ, ವಾಯವ್ಯದಲ್ಲಿ ಪಲ್ಲವಾದ್ರಿ, ದಕ್ಷಿಣದಲ್ಲಿ ಶಂಬರಗಿರಿ, ನೈಋತ್ಯದಲ್ಲಿ ಗರುಡಾದ್ರಿ ಹಾಗೂ ಈಶಾನ್ಯದಲ್ಲಿ ಮಲ್ಲಿಕಾರ್ಜುನ ಗಿರಿಗಳೆಂಬ 8 ಬೆಟ್ಟಗಳಿಂದ ಆವೃತವಾಗಿರುವುದರಿಂದ ಇದನ್ನು ಕಮಲಾದ್ರಿ ಎನ್ನಲಾಗುತ್ತಿದೆ.