ಆಲಿಕಲ್ಲು ಜೋರು ಮಳೆ

ಕೂಡಲೂರು ಗ್ರಾಮದಲ್ಲಿ ಬುಧವಾರ ಸಂಜೆ ಆಲಿಕಲ್ಲು ಮಳೆ ಸುರಿಯಿತು.
ಕೂಡಲೂರು ಗ್ರಾಮದಲ್ಲಿ ಬುಧವಾರ ಸಂಜೆ ಆಲಿಕಲ್ಲು ಮಳೆ ಸುರಿಯಿತು.
Published on
ಹನೂರು: ತಾಲೂಕಿನ ಕೆಲವೆಡೆ ಬುಧವಾರ ಸಂಜೆ ಆಲಿಕಲ್ಲು ಮಳೆ ಸುರಿದರೆ, ಪಟ್ಟಣ ಸೇರಿದಂತೆ ಇತರೆಡೆ ಸುಮಾರು ಅರ್ಧ ತಾಸು ಜೋರು ಮಳೆ ಸುರಿಯಿತು. ಇದರಿಂದ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ತಂಪು ಅನುಭವ ನೀಡಿತು.
ಹನೂರು ಭಾಗದಲ್ಲಿ ಈ ವರ್ಷ ಮಳೆ ಕೊರತೆಯಾದ ಪರಿಣಾಮ ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿತದಿಂದ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಜನರು ತುಂಬ ಸಮಸ್ಯೆ ಎದುರಿಸುತ್ತಿದ್ದರು.
ಬುಧವಾರ ಸಂಜೆ 4ರ ವೇಳೆಯಲ್ಲಿ ಕೂಡಲೂರು ಹಾಗೂ ಒಡೆಯರಪಾಳ್ಯ ಭಾಗದ ಕೆಲವೆಡೆ ಆಲಿಕಲ್ಲು ಮಳೆ ಸುರಿದರೆ, ಹನೂರು, ಮಂಗಲ, ಚಿಕ್ಕಮಾಲಾಪುರ, ಲೊಕ್ಕನಹಳ್ಳಿ, ಗುಂಡಾಪುರ ಹಾಗೂ ಈ ಭಾಗದ ಇತರೆಡೆ ಸಂಜೆ 6ರಲ್ಲಿ ಆರಂಭವಾದ ಗುಡುಗು ಸಹಿತ ಜೋರು ಮಳೆ ಸುಮಾರು ಅರ್ಧ ಗಂಟೆ ಸುರಿಯಿತು. ಇದರಿಂದ ತಾಲೂಕಿನಲ್ಲಿ ತಂಪು ವಾತಾವರಣ ಕಂಡುಬಂತು. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರು ನಿಟ್ಟುಸಿರು ಬಿಟ್ಟಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net