ಪೊನ್ನಾಚಿ ಗ್ರಾಮದಲಿ ಜೋರು ಮಳೆ

ಪೊನ್ನಾಚಿಯಲ್ಲಿ ಜೋರು ಮಳೆ ಸುರಿದ ಪರಿಣಾಮ ಶಂಕರ ಅವರ ಮನೆಗೆ ನುಗ್ಗಿದ ನೀರನ್ನು ಹೊರಹಾಕಿದರು.
ಪೊನ್ನಾಚಿಯಲ್ಲಿ ಜೋರು ಮಳೆ ಸುರಿದ ಪರಿಣಾಮ ಶಂಕರ ಅವರ ಮನೆಗೆ ನುಗ್ಗಿದ ನೀರನ್ನು ಹೊರಹಾಕಿದರು.
Published on
ಹನೂರು : ತಾಲೂಕಿನ ಕಾಡಂಚಿನ ಗ್ರಾಮ ಪೊನ್ನಾಚಿ ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಜೋರು ಮಳೆಗೆ ಮನೆಯೊಂದಕ್ಕೆ ನೀರು ನುಗ್ಗಿದ್ದು, ಕುಟುಂಬಸ್ಥರು ಪರದಾಡುವಂತಾಯಿತು.
ಸಂಜೆ 7ರ ವೇಳೆಯಲ್ಲಿ ಆರಂಭವಾದ ಜೋರು ಮಳೆ ಸುಮಾರು ಒಂದು ಗಂಟೆಗಳ ಕಾಲ ಸುರಿಯಿತು. ಪರಿಣಾಮ ಗ್ರಾಮದ ಮುಖ್ಯ ರಸ್ತೆಯಲ್ಲಿ ಎತೇಚ್ಛವಾದ ನೀರು ಹಳ್ಳದಂತೆ ಹರಿಯ ತೊಡಗಿತು. ಜನರು ಸಂಚರಿಸಲು ತೊಡುಕಾಗಿ ಪರಿಣಮಿಸಿತು. ಇತ್ತ ಶಂಕರ ಅವರ ಮನೆಗೆ ನೀರು ನುಗ್ಗಿತು. ಇದರಿಂದ ದಿನಸಿ ಪದಾರ್ಥ ಹಾಗೂ ಕೆಲ ಗೃಹೋಪಯೋಗಿ ವಸ್ತುಗಳ ಹಾನಿಯಾಗಿದೆ. ಮನೆಯೊಳಗೆ ಸಂಗ್ರಹಣೆಯಾದ ನೀರನ್ನು ಹೊರ ಹಾಕಲು ಕುಟುಂಬಸ್ಥರು ಹರಸಾಹಸಪಟ್ಟರು.
ತಗ್ಗು ಪ್ರದೇಶದಿಂದ ಕೂಡಿರುವ ಗ್ರಾಮದ ಬೀದಿಯಲ್ಲಿ ಚರಂಡಿಯನ್ನು ನಿರ್ಮಿಸಿರುವುದರ ಮೂಲಕ ಮಳೆಗಾಲದ ವೇಳೆ ಮನೆಗಳಿಗೆ ನೀರು ನುಗ್ಗದಂತೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಅಗತ್ಯ ಕ್ರಮ ವಹಿಸುವಂತೆ ಗ್ರಾಮದ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net