ಮಿಣ್ಯಂ, ಮಾರ್ಟಳ್ಳಿ ಭಾಗದಲ್ಲಿ ಜೋರು ಮಳೆ

ಮಿಣ್ಯಂ ಸಮೀಪದ ಮಿನ್ನತ್ತುಹಳ್ಳದ ಚೆಕ್ ಡ್ಯಾಂನಲ್ಲಿ ನೀರು ಹರಿಯಿತು.
ಮಿಣ್ಯಂ ಸಮೀಪದ ಮಿನ್ನತ್ತುಹಳ್ಳದ ಚೆಕ್ ಡ್ಯಾಂನಲ್ಲಿ ನೀರು ಹರಿಯಿತು.
Published on
ಹನೂರು: ತಾಲೂಕಿನ ಮಿಣ್ಯಂ ಹಾಗೂ ಮಾರ್ಟಳ್ಳಿ ಭಾಗದಲ್ಲಿ ಸೋಮವಾರ ಸುಮಾರು ಒಂದೂವರೆ ಗಂಟೆ ಜೋರು ಮಳೆ ಸುರಿಯಿತು.
ಮಾರ್ಟಳ್ಳಿ ಭಾಗದಲ್ಲಿ ಭಾನುವಾರ ಸುಮಾರು ಒಂದು ಗಂಟೆಗಳ ಕಾಲ ಜೋರು ಮಳೆ ಸುರಿದು ರಸ್ತೆಗಳಲ್ಲಿ ಅಪಾರ ನೀರು ಹರಿಯುವಂತಾಗಿತ್ತು. ಸೋಮವಾರ ಮಧ್ಯಾಹ್ನ ಮಾರ್ಟಳ್ಳಿ, ಮಿಣ್ಯಂ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಸುಮಾರು ಒಂದೂವರೆ ಗಂಟೆಗಳ ಜೋರು ಮಳೆ ಸುರಿಯಿತು. ಇದರಿಂದ ಈ ಭಾಗದ ಮಿನ್ನತ್ತು ಹಳ್ಳ, ಇನ್ನಿತರ ಹಳ್ಳ ಕೊಳ್ಳಗಳು ಹಾಗೂ ಚೆಕ್ ಡ್ಯಾಂಗಳಿಗೆ ನೀರು ಹರಿಯಿತು. ಜತೆಗೆ ಇತ್ತೀಚಿಗೆ ಅಭಿವೃದ್ಧಿಪಡಿಸಿದ್ದ ಮಾರ್ಟಳ್ಳಿ ಸಮೀಪದ ಹಾಲೇರಿ ಕೆರೆಯಲ್ಲಿ ನೀರು ಸಂಗ್ರಹವಾಯಿತು. ನೀರಿನ ಸೆಳೆತಕ್ಕೆ ಕೆರೆ ಸುತ್ತ ಸಮತಟ್ಟು ಮಾಡಿದ್ದ ಮಣ್ಣು ಕುಸಿದಿದೆ.
ಒಟ್ಟಿನಲ್ಲಿ ಕಳೆದ 2 ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಲಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಕೆಲವರು ಹಳ್ಳ ಕೊಳ್ಳಗಳಲ್ಲಿ ನೀರು ಹರಿಯುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net