ಹನುಮನ ಭಾವಚಿತ್ರ ಮೆರವಣಿಗೆ

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಹನುಮನ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಹನುಮನ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
Published on
ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ವಾಲ್ಮೀಕಿ-ನಾಯಕ ಜನಾಂಗದ ವತಿಯಿಂದ ರಾಮೋತ್ಸವ ಅಂಗವಾಗಿ ಹನುಮನ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಅಲಂಕೃತ ವಾಹನದಲ್ಲಿ ಆಂಜನೇಯನ ಭಾವಚಿತ್ರವನ್ನು ಇರಿಸಿ ಗ್ರಾಮದ ಸಿದ್ದಪ್ಪಾಜಿ ದೇವಾಲಯದಿಂದ ರಾಮಾಯಣದ ಪಾತ್ರಧಾರಿಗಳು, ಜನಪದ ಕಲಾತಂಡಗಳು, ಸತ್ತಿಗೆ, ಮಂಗಳವಾದ್ಯಗಳ ಜತೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಜನಾಂಗದ ಯುವಕರು, ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net