ಹನುಮದ್ ವ್ರತ ಮೆರವಣಿಗೆ

  ಗುಂಡ್ಲುಪೇಟೆಯಲ್ಲಿ ಶನಿವಾರ ವಿವಿಧ ಹಿಂದುಪರ ಸಂಘಟನೆಗಳು ಹಾಗೂ ಹನುಮ ಭಕ್ತರು ಆಯೋಜಿಸಿದ್ದ ಹನುಮದ್ ವ್ರತ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಗಮನಸೆಳೆದರು.
ಗುಂಡ್ಲುಪೇಟೆಯಲ್ಲಿ ಶನಿವಾರ ವಿವಿಧ ಹಿಂದುಪರ ಸಂಘಟನೆಗಳು ಹಾಗೂ ಹನುಮ ಭಕ್ತರು ಆಯೋಜಿಸಿದ್ದ ಹನುಮದ್ ವ್ರತ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಗಮನಸೆಳೆದರು.
Published on
ಗುಂಡ್ಲುಪೇಟೆ : ಪಟ್ಟಣದಲ್ಲಿ ಶನಿವಾರ ನಾನಾ‌ ಹಿಂದೂ ಸಂಘಟನೆಗಳು ಹಾಗೂ ಹನುಮ ಭಕ್ತರು ಆಯೋಜಿಸಿದ್ದ ಹನುಮಜಯಂತಿ‌ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಚಾಮರಾಜನಗರ ಜೋಡಿರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನದಿಂದ ಬೆಳಗ್ಗೆ 9.30 ಗಂಟೆಗೆ ಹನುಮ ಜಯಂತಿ ಮೆರವಣಿಗೆ ಆರಂಭವಾಗಿ
ಕೋಡಹಳ್ಳಿ ರಸ್ತೆ ಮೂಲಕ ಕ್ವತ್ವಾಲ್ ಛಾವಡಿ, ಕೆ.ಆರ್.ಸಿ ರಸ್ತೆ, ಹಳೇ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ವೀರಮದಕರಿ ನಾಯಕ ವೃತ್ತದ ಮಾರ್ಗವಾಗಿ ಅರಳಿಕಟ್ಟೆ, ಅಂಬೇಡ್ಕರ್ ಸರ್ಕಲ್ ನಲ್ಲಿ ಸಾಗಿತು. ನಾಸಿಕ್ ಡೋಲ್, ಮಂಗಳ ವಾಧ್ಯಗಳೊಂದಿಗೆ ಮಡಿಕೇರಿಯಿಂದ ತರಿಸಿದ ಮೂವತ್ತು ಅಡಿ ಎತ್ತರದ ಹನುಮ ಮೂರ್ತಿ, ಕೆ.ಆರ್.ನಗರದಿಂದ ರಾಮನ ಮೂರ್ತಿಗಳನ್ನು ಸ್ಥಳೀಯ ಕಲಾತಂಡಗಳು, ವಿವಿಧ ಗ್ರಾಮಗಳಿಂದ ಸತ್ತಿಗೆ ಸುರಪಾಣಿಯೊಂದಿಗೆ ಮೆರವಣಿಗೆ ಮಾಡಲಾಯಿತು. ಹನುಮೋತ್ಸವಕ್ಕೆ ಬಂದಿದ್ದ ಭಕ್ತಾದಿಗಳಿಗೆ ಪಟ್ಟಣದ ಸೋಮೇಶ್ವರ ಹಾಸ್ಟೆಲ್ ನಲ್ಲಿ ಮಧ್ಯಾಹ್ನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಡಿಜೆ ಅಬ್ಬರಕ್ಕೆ ಹೆಜ್ಜೆಹಾಕಿದ ಭಕ್ತರು. ಹನುಮೋತ್ಸವದ ಅಂಗವಾಗಿ ಪಟ್ಟಣದ ಎಲ್ಲಾ ರಸ್ತೆಯಲ್ಲಿ ಕೇಸರಿ ಬಂಟಿಂಗ್ಸ್ ಕಟ್ಟಿದ್ದರಿಂದ ಇಡೀ ಪಟ್ಟಣದ ಕೇಸರಿಮಯವಾಗಿತ್ತು. ಯುವಕರು ಮುಖಂಡರು ಡಿಜೆ‌ಅಬ್ಬರಕ್ಕೆ ತಕ್ಕಂತೆ ಹೆಜ್ಜೆಹಾಕಿದರು. ಪೊಲೀಸ್ ಬಿಗಿ ಬಂದೋಬಸ್ತ್;
ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಾಡಲು ಎಸ್ ಪಿ ಡಾ.ಕವಿತ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಆಯೋಜಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net