

ಪ್ರಮುಖ ಮುಖ್ಯಾಂಶಗಳು
ಆಲಿಕಲ್ಲು ಸಹಿತ ಮಳೆಯಿಂದ ಬೆಳೆ ಹಾನಿ ಉಂಟಾಗಿರುವ ಕುರಿತು ಸರ್ವೆ ನಡೆಸಲಾಗುತ್ತಿದೆ. ಸದ್ಯಕ್ಕೆ 330 ಎಕರೆಯಲ್ಲಿ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ಅಧಿಕ ಪ್ರಮಾಣದಲ್ಲಿ ಬಾಳೆ ಬೆಳೆ ಹಾನಿಯಾಗಿದೆ. ಸರ್ವೆ ಮುಗಿದ ಬಳಿಕ ಪರಿಹಾರಕ್ಕೆ ಕಳುಹಿಸಲಾಗುವುದು.
ಹನೂರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಮಳೆಯ ರಭಸಕ್ಕೆ ಎರಡು ಎಕರೆಯಲ್ಲಿ ಹಾಕಿದ್ದ ಬಾಳೆ ಹಾನಿಯಾಗಿದೆ. ಬಾಳೆ ಗೊನೆ ನೆಲಕಚ್ಚಿವೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಕೋರಲಾಗುವುದು.