16 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ನಿರ್ಧಾರ

collective photo
collective photo
Published on
ಗುಂಡ್ಲುಪೇಟೆ: ತಾಲೂಕಿನ ಕಲ್ಲುಕಟ್ಟೆ ಕೆರೆ ಜಲಾಶಯ ಹಾಗೂ ನಲ್ಲೂರು ಅಮಾನಿ ಕೆರೆಗಳಿಗೆ ನೀರು ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಡಿ.16ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ರೈತರು ಮುಂದಾಗಿದ್ದಾರೆ.
ಅಕ್ಟೋಬರ್ ಮೊದಲ ವಾರ ತಾಲೂಕಿನ ಕಲ್ಲುಕಟ್ಟೆ ಅಣೆಕಟ್ಟು ಮತ್ತು ನಲ್ಲೂರು ಅಮಾನಿ ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ನಾಲ್ಕನೇ ಹಂತದ ಅಚ್ಚುಕಟ್ಟು ಪ್ರದೇಶದ ರೈತರು ಕಲ್ಲುಕಟ್ಟೆ ಕೆರೆ ಅಂಗಳದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಭೇಟಿ ನೀಡಿದ್ದ ಶಾಸಕ ಗಣೇಶ ಪ್ರಸಾದ್ ಡಿಸೆಂಬರ್ ಮೊದಲ ವಾರದಲ್ಲಿಯೇ ಕೆರೆಗಳಿಗೆ ನೀರು ಬಿಡಲಾಗುತ್ತದೆ ಎಂಬ ಭರವಸೆ ನೀಡಿದ್ದರು. ಆದರೆ, ಡಿಸೆಂಬರ್ ತಿಂಗಳು ಅರ್ಧ ಮುಗಿದರೂ ನೀರು ಹರಿಸದಿರುವುದು ರೈತರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ. ಈಗಾಗಲೇ ಬೆಳೆದಿರುವ ಬೆಳೆಗಳಿಗೆ ಅಗತ್ಯ ನೀರು ಲಭ್ಯವಾಗದೆ ಈಗಾಗಲೇ ಬಿತ್ತನೆ ಮಾಡಿಕೊಂಡಿರುವ ಬೆಳೆಗಳು ಒಣಗುವ ಅಪಾಯ ಎದುರಾಗಿದೆ. ಅರಿಶಿಣ, ಬಾಳೆ, ಜೋಳ, ಕಬ್ಬು, ತರಕಾರಿ ಹಾಗೂ ಇತರೆ ಬೆಳೆಗಳು ಸೇರಿದಂತೆ ಪ್ರಮುಖ ಹಣ್ಣು ಮತ್ತು ಕೃಷಿ ಬೆಳೆಗಳು ನೀರಿಲ್ಲದೆ ಹಾನಿಯಾಗುವ ಸ್ಥಿತಿಗೆ ಬಂದಿರುವುದರಿಂದ ರೈತರ ಆರ್ಥಿಕ ಸ್ಥಿತಿ ಗಂಭೀರವಾಗಿ ಕುಸಿಯುತ್ತಿದೆ.
ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ರೈತರಾದ ನಾಗಾರ್ಜುನ್ ಕುಮಾರ್, ಸಂತೋಷ್ ಶಶಿಕುಮಾರ್, ಮಂಜುನಾಥ್, ಲೋಕೇಶ್, ಮಾದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net