ಮುದ್ದಾನೇಶ್ವರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ
ಗುಂಡ್ಲುಪೇಟೆ ಪಟ್ಟಣದ ಮದ್ದಾನೇಶ್ವರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿವಲಿಂಗೇಂದ್ರ ಸ್ವಾಮೀಜಿ ಹಾಗೂ ಶಿಕ್ಷಕ ವರ್ಗದವರು ಸಿಹಿ ಹಂಚಿ ಶಾಲೆಗೆ ಬರಮಾಡಿಕೊಂಡರು.
Published on:
Copied
Follow Us
ಗುಂಡ್ಲುಪೇಟೆ: ಬೇಸಿಗೆ ರಜೆ ಮುಗಿಸಿ ಪಟ್ಟಣದ ಮದ್ದಾನೇಶ್ವರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಸ್ವಾಮೀಜಿ ಹಾಗೂ ಶಿಕ್ಷಕರ ತಂಡ ಸ್ವಾಗತಿಸಿತು.
ಈ ಬಾರಿ ಶಾಲೆಯ ಆರಂಭವನ್ನು ಸಡಗರದಿಂದ ಆಚರಿಸುವ ಸಲುವಾಗಿ ಪ್ರವೇಶ ದ್ವಾರದಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಹೂ ಮಳೆಗೆರೆಯುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಶುಕ್ರವಾರ ಬೆಳಗ್ಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪಡಗೂರು ಅಡವಿ ಮಠಾಧ್ಯಕ್ಷರಾದ ಶಿವಲಿಂಗೇಂದ್ರ ಸ್ವಾಮೀಜಿ ಹಾಗೂ ಶಿಕ್ಷಕ ವರ್ಗದವರು ಸಿಹಿ ಹಂಚಿದರು.
ವಿದ್ಯಾರ್ಥಿಗಳು, ತಮ್ಮ ಶಿಕ್ಷಕರು, ಸಹಪಾಠಿಗಳನ್ನು ಕಂಡು ಸಂತೋಷದಿಂದ ಶಾಲೆಗೆ ಪ್ರವೇಶಿಸಿದರು.
ಶಾಲೆಯ ಮುಖ್ಯಶಿಕ್ಷಕ ಎಂ.ಪ್ರಕಾಶ್. ಸಹಶಿಕ್ಷಕರಾದ ಸೋಮಶೇಖರ್, ದೈಹಿಕ ಶಿಕ್ಷಣ ಶಿಕ್ಷಕ ಮಡಹಳ್ಳಿ ಮಹೇಶ್, ಗೋಪಾಲ ಶೆಟ್ಟಿ, ಸ್ವಾಮಿ ಹಾಗೂ ಇತರರು ಇದ್ದರು.