ಗುಂಡ್ಲುಪೇಟೆಗೆ ಶೇ.94.17 ಫಲಿತಾಂಶ

 ಆರ್.ಪ್ರತಿಭಾ ಜಿಪಿಟಿ
ಆರ್.ಪ್ರತಿಭಾ ಜಿಪಿಟಿ
Published on
ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಿಗೆ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.94.17 ಫಲಿತಾಂಶ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ತಿಳಿಸಿದ್ದಾರೆ.
ತಾಲೂಕಿನಲ್ಲಿ 20 ಸರ್ಕಾರಿ, ಸರ್ಕಾರಿ ವಸತಿ 6, ಅನುದಾನಿತ 14 ಮತ್ತು ಅನುದಾನ ರಹಿತ 10 ಸೇರಿದಂತೆ ಒಟ್ಟು 50 ಪ್ರೌಢಶಾಲೆಗಳಿದ್ದು, ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ 2197 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 2069 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ: ಗುಂಡ್ಲುಪೇಟೆಯ ಸರ್ಕಾರಿ ಆದರ್ಶ ವಿದ್ಯಾಲಯದ ಆರ್.ಪ್ರತಿಭಾ-618, ಬೇಗೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಬಿ.ಎಂ.ಅಪೂರ್ವ-616, ಸಕಾರಿ ಆದರ್ಶ ವಿದ್ಯಾಲಯದ ಆರ್.ಗೀತಾ -614, ಬಿ.ಎಂ.ಮೈತ್ರಿ -614, ಸೆಂಟ್ ಜಾನ್ ಶಾಲೆಯ ಕೆ.ಬಿ.ಕಿಶನ್ -614 ಅಂಕ ಪಡೆದಿದ್ದಾರೆ.
ಶೇ.100 ಫಲಿತಾಂಶ: ಕಬ್ಬಹಳ್ಳಿಯ ಶ್ರೀ ಮತಿ ಕೆಂಪದೇವಮ್ಮ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಗುಂಡ್ಲುಪೇಟೆಯ ಸರ್ಕಾರಿ ಆದರ್ಶ ವಿದ್ಯಾಲಯ (ಚಿಕ್ಕತುಪ್ಪೂರು), ಬೊಮ್ಮನಹಳ್ಳಿ ಮತ್ತು ತೆರಕಣಾಂಬಿಯ ಡಾ.ಬಿ.ಆರ್ . ಅಂಬೇಡ್ಕರ್ ವಸತಿ ಶಾಲೆ, ಮೇಲುಕಾಮನಹಳ್ಳಿ ಮತ್ತು ಯಡವನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ, ಬೇಗೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಶಿವಪುರದ ಜೆಎಸ್‌ಎಸ್ ಪ್ರೌಢಶಾಲೆ, ತೆರಕಣಾಂಬಿಯ ಜೆಎಸ್‌ಎಸ್ ಪ್ರೌಢಶಾಲೆ, ವಡ್ಡಗೆರೆಯ ಟಿಎಸ್‌ಎಸ್ ಪ್ರೌಢಶಾಲೆ, ಗುಂಡ್ಲುಪೇಟೆಯ ನಿರ್ಮಲ ಕಾನ್ವೆಂಟ್, ಸೇಂಟ್ ಜಾನ್, ಆದರ್ಶ ವಿದ್ಯಾಲಯ (ಖಾಸಗಿ), ಮಾನಸ ವಿದ್ಯಾಲಯ, ಸಿಎಂಐ ಕ್ರೈಸ್ಟ್, ಶ್ರೀ ಮದ್ದಾನೇಶ್ವರ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ, ಬೇಗೂರಿನ ಲಿಟಲ್ ಫ್ಲವರ್, ಆಕ್ಸ್ ಫರ್ಡ್ ಶಾಲೆ ಸಾಧನೆ ಮಾಡಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net