ಇಬ್ಬರು ವನ್ಯಜೀವಿ ಬೇಟೆಗಾರರ ಬಂಧನ

ಗುಂಡ್ಲುಪೇಟೆ ಅರಣ್ಯ ಇಲಾಖೆಯ ಎಸ್‌ಟಿಪಿಎಫ್ ಸಿಬ್ಬಂದಿ ಇಬ್ಬರು ವನ್ಯಜೀವಿ ಬೇಟೆಗಾರರನ್ನು ಮಾಲು ಸಮೇತ ಬಂಧಿಸಿದರು. ಮಂಂಜುನಾಥ್, ವೆಂಕಟೇಶ್, ಜ್ಞಾನಶೇಖರ್, ಕಾರ್ತಿಕ್ ಯಾದವ್, ಅಮರ್, ಆನಂದ್, ರವಿಕುಮಾರ್, ವಿನಯ್, ಚಂದ್ರಶೇಖರ್, ಯಾಸೀನ್, ನಾರಾಯಣ್ ಇದ್ದರು.

Published on
ಗುಂಡ್ಲುಪೇಟೆ: ಅರಣ್ಯ ಇಲಾಖೆಯ ಎಸ್‌ಟಿಪಿಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರು ವನ್ಯಜೀವಿ ಬೇಟೆಗಾರರನ್ನು ಮಾಲು ಸಮೇತ ಬಂಧಿಸಿದ್ದಾರೆ.
ಎಸ್‌ಟಿಪಿಎಫ್ ಸಿಬ್ಬಂದಿ ಗುರುವಾರ ರಾತ್ರಿ 2 ಗಂಟೆಯಲ್ಲಿ ವಡ್ಡರಹಳ್ಳಿ ಗಸ್ತಿನಲ್ಲಿದ್ದಾಗ ಮೊಪೆಡ್‌ನಲ್ಲಿ ಬರುತ್ತಿದ್ದ ತಾಲೂಕಿನ ಬನ್ನಿತಾಳಪುರ ಗ್ರಾಮದ ಶಿವಕುಮಾರ್(25) ಹಾಗೂ ಮನೋಜ್‌ಕುಮಾರ್(25) ಎಂಬುವರನ್ನು ಪರಿಶೀಲಿಸಿದಾಗ ಒಂದು ನಾಡ ಬಂದೂಕು, ಎರಡು ಜೀವಂತ ಮೊಲಗಳು ಪತ್ತೆಯಾದವು. ಮೊಪೆಡ್, ಟಾರ್ಚ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್‌ಟಿಪಿಎಫ್‌ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಆರ್‌ಎಫ್‌ಒ ವೆಂಕಟೇಶ್, ಡಿಆರ್‌ಎಫ್‌ಒಗಳಾದ ಜ್ಞಾನಶೇಖರ್, ಕಾರ್ತಿಕ್ ಯಾದವ್, ಅಮರ್, ಆನಂದ್, ರವಿಕುಮಾರ್, ವಿನಯ್, ಚಂದ್ರಶೇಖರ್, ಯಾಸೀನ್ ಹಾಗೂ ನಾರಾಯಣ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net