ಸ್ವಾಗತ ಕಮಾನು ನಿರ್ಮಾಣಕ್ಕೆ ಭೂಮಿಪೂಜೆ

ಟೋ ಇದರ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದಲ್ಲಿ ಮಹನೀಯರ ಪುತ್ಥಳಿ ನಿರ್ಮಾಣ ಕಾಮಗಾರುಗೆ ಗೋಪಾಲ ಭೂಮಿ ಪೂಜೆ ನೆರವೇರಿಸಿದರು. ಮಹೇಶ, ಶಿವಸ್ವಾಮಿ ಇದ್ದರು.
ಟೋ ಇದರ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದಲ್ಲಿ ಮಹನೀಯರ ಪುತ್ಥಳಿ ನಿರ್ಮಾಣ ಕಾಮಗಾರುಗೆ ಗೋಪಾಲ ಭೂಮಿ ಪೂಜೆ ನೆರವೇರಿಸಿದರು. ಮಹೇಶ, ಶಿವಸ್ವಾಮಿ ಇದ್ದರು.
Published on
ಗುಂಡ್ಲುಪೇಟೆ: ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಮಾಜಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರ ಆಪ್ತ ಸಹಾಯಕ ಗೋಪಾಲ್ ಹೊರೆಯಾಲ ಹೇಳಿದರು.
ತಾಲೂಕಿನ ಹೊರೆಯಾಲ ಗ್ರಾಮದಲ್ಲಿ ಬುದ್ಧ, ಬಸವ,ಅಂಬೇಡ್ಕರ್,ವಾಲ್ಮೀಕಿ ಪುತ್ಥಳಿ ಒಳಗೊಂಡಂತೆ ಸ್ವಾಗತ ಕಮಾನು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್ ಬೋಸ್ ಅವರ ಸಹಕಾರದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ಜಿಪಂ ಮಾಜಿ ಸದಸ್ಯ ಶಿವಸ್ವಾಮಿ, ಪಿಎಲ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಚ್.ಎಂ.ಮಹೇಶ್, ವಕೀಲ ಮಹೇಶ್, ಯಜಮಾನರಾದ ಚಿಕ್ಕತಮ್ಮಯ್ಯ, ಡಿ.ಮಹದೇವನಾಯಕ, ಇಂದ್ರನಾಯಕ, ಸಹ ಪ್ರಾಧ್ಯಾಪಕ ಡಾ.ಬಿ.ಶೇಖರ್, ಉಪನ್ಯಾಸಕ ಜಗದೀಶ್, ಶಿಕ್ಷಕರಾದ ಮಹೇಶ್ವರಿ, ಸಿಆರ್‌ಪಿಎಫ್‌ನ ರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net