ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಕುಡಿಯುವ ನೀರು, ಶಾಲಾ ಕೊಠಡಿ ನಿರ್ಮಾಣದಂತಹ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಗ್ರಾಮದಲ್ಲಿ ಮೂಲಸೌಕರ್ಯ ಸಮಸ್ಯೆ ಇದ್ದರೆ ತಕ್ಷಣ ಪರಿಹರಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು. ಪಿಎಸಿಸಿ ಅಧ್ಯಕ್ಷ ಮಣಿನಾಯಕ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಕಾರ್ಯಧ್ಯಕ್ಷ ಪಿ.ಕುಮಾರನಾಯಕ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಶಾಂತಮ್ಮ, ಶಾಮೀರ್ ಪಾಷಾ, ಸದಸ್ಯ ನಾಗನಾಯಕ, ಜಡೆಯಪ್ಪ, ಶಂಕರ್, ಗುತ್ತಿಗೆದಾರ ವೀರಭದ್ರಪ್ಪ, ಕಾರ್ತಿಕ್, ಬಸವಣ್ಣ, ಇಂಜಿನಿಯರ್ ಭೀಮ್‌ಸಾಗರ್ ಮತ್ತು ಇತರರು ಇದ್ದರು.