ಸುತ್ತೂರು ಜಾತ್ರೆ ಪ್ರಚಾರ ರಥಕ್ಕೆ ಅದ್ಧೂರಿ ಚಾಲನೆ

ಚಾಮರಾಜನಗರದ ನಗರದ ಜೆಎಸ್‌ಎಸ್ ಕಾಲೇಜು ಆವರಣಕ್ಕೆ ಮಂಗಳವಾರ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಸ್ವಾಗತ ಕೋರಲಾಯಿತು. ಆರ್.ಎಂ.ಸ್ವಾಮಿ, ಸರ್ಪಭೂಷಣಸ್ವಾಮೀಜಿ, ಪಿ.ಮರಿಸ್ವಾಮಿ, ಮೂಡ್ಲಪುರು ನಂದೀಶ್, ಲಕ್ಷ್ಮಮ್ಮ, ಎಚ್.ಎಸ್.ಬಸವರಾಜು, ಡಾ. ಪರಮೇಶ್ವರಪ್ಪ,  ಹೊಸೂರು ನಟೇಶ್ ಮತ್ತು ಇತರರು ಹಾಜರಿದ್ದರು.
ಚಾಮರಾಜನಗರದ ನಗರದ ಜೆಎಸ್‌ಎಸ್ ಕಾಲೇಜು ಆವರಣಕ್ಕೆ ಮಂಗಳವಾರ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಸ್ವಾಗತ ಕೋರಲಾಯಿತು. ಆರ್.ಎಂ.ಸ್ವಾಮಿ, ಸರ್ಪಭೂಷಣಸ್ವಾಮೀಜಿ, ಪಿ.ಮರಿಸ್ವಾಮಿ, ಮೂಡ್ಲಪುರು ನಂದೀಶ್, ಲಕ್ಷ್ಮಮ್ಮ, ಎಚ್.ಎಸ್.ಬಸವರಾಜು, ಡಾ. ಪರಮೇಶ್ವರಪ್ಪ, ಹೊಸೂರು ನಟೇಶ್ ಮತ್ತು ಇತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸುತ್ತೂರು ಶ್ರೀಕ್ಷೇತ್ರದಲ್ಲಿ ಜ. 15 ರಿಂದ 20 ರವರೆಗೆ ನಡೆಯುವ ಜಾತ್ರಾ ಮಹೋತ್ಸವ
  • ಪ್ರಚಾರ ರಥ ಬರ ಮಾಡಿಕೊಂಡು ಪೂಜೆ
ಚಾಮರಾಜನಗರ: ಸುತ್ತೂರು ಶ್ರೀಕ್ಷೇತ್ರದಲ್ಲಿ ಜ. 15 ರಿಂದ 20 ರವರೆಗೆ ನಡೆಯುವ ಜಾತ್ರಾ ಮಹೋತ್ಸವದ ಪ್ರಚಾರ ರಥ ಮಂಗಳವಾರ ನಗರದ ಜೆಎಸ್‌ಎಸ್ ಕಾಲೇಜು ಆವರಣಕ್ಕೆ ಆಗಮಿಸಿತು.
ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಸಂಯೋಜಕ ಆರ್.ಎಂ.ಸ್ವಾಮಿ ಬರ ಮಾಡಿಕೊಂಡು ವಿಶೇಷವಾಗಿ ಹೂವುಗಳಿಂದ ಅಲಂಕೃತಗೊಳಿಸಿ ಬಾಳೆಕಂದು ಕಟ್ಟಿ ಪೂಜೆ ಸಲ್ಲಿಸಿ, ಈಡುಗಾಯಿ ಹೊಡೆದು ಪ್ರಚಾರ ರಥಕ್ಕೆ ಚಾಲನೆ ನೀಡಿದರು. ಹರವೆ ಮಠ ಶ್ರೀಸರ್ಪಭೂಷಣಸ್ವಾಮೀಜಿ ಪ್ರಚಾರ ರಥದ ಮುಂಭಾಗದಲ್ಲಿದ್ದ ಶ್ರೀಶಿವರಾತ್ರಿಶ್ವರ ಶಿವಯೋಗಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಶ್ರೀಮಠದ ಸರ್ಪಭೂಷಣಸ್ವಾಮೀಜಿ ಮಾತನಾಡಿ, ಸುತ್ತೂರು ಜಾತ್ರೆ ಎಂದರೆ ವಿಶೇಷ. ಗ್ರಾಮೀಣ ಸೊಗಡು ಹಾಗೂ ಎಲ್ಲ ಕ್ಷೇತ್ರಗಳ ಗಣ್ಯರು ಜಾತ್ರೆಯಲ್ಲಿ ಭಾಗವಹಿಸುವುದು ವಿಶೇಷವಾಗಿದೆ. ಜಾತ್ರೆ ಮಹೋತ್ಸವ ಐದು ದಿನಗಳ ಕಾಲ ಮೈಸೂರು ಭಾಗದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಜ.15ರಿಂದ ಆರಂಭವಾಗುವ ಜಾತ್ರೆಯಲ್ಲಿ ಮೊದಲ ದಿನ ಉತ್ಸವ ಮೂರ್ತಿ ಗದ್ದುಗೆಗೆ ಬಿಜಯಂಗೈಸುವುದು. ಜ.16ರರಂದು ಹಾಲುರವಿ ಉತ್ಸವ, ಶ್ರೀಸೋಮೇಶ್ವರಸ್ವಾಮಿ ಕುಂಬಾಭಿಷೇಕ, ಶ್ರೀವೀರಭದ್ರೇಶ್ವರ ಕೊಂಡೋತ್ಸವ, ಜ.17 ರಂದು ರಥೋತ್ಸವ, 18 ರಂದು ಮಹದೇಶ್ವರ ಕೊಂಡೊತ್ಸವ, ಲಕ್ಷ ದೀಪೋತ್ಸವ, ಶ್ರೀಮಹದೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ, ಜ. 19 ರಂದು ತೆಪ್ರೋತ್ಸವ, ಜ. 20 ರಂದು ಅನ್ನ ಬ್ರಹ್ಮೋತ್ಸವದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.
ಈ ಐದು ದಿನಗಳ ಕಾಲ ಸಾಮೂಹಿಕ ವಿವಾಹ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ, ರಂಗೋಲಿ, ಸೋಬಾನೆ ಪದ, ಗಾಳಿಪಟ, ಚಿತ್ರಕಲೆ, ರಾಗಿ ಬೀಸುವ ಸ್ಪರ್ಧೆ, ವಸ್ತುಪ್ರದರ್ಶನ, ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಈ ಐದು ದಿನಗಳ ಜಾತ್ರೆ ಮಹೋತ್ಸವದಲ್ಲಿ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರುತ್ತೇವೆ ಎಂದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಹಾಸಭಾ ಅಧ್ಯಕ್ಷ ಮೂಡ್ಲಪುರು ನಂದೀಶ್, ಲಕ್ಷ್ಮಮ್ಮ, ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು, ಡಾ. ಪರಮೇಶ್ವರಪ್ಪ, ಹೊಸೂರು ನಟೇಶ್, ಕಿಲಗೆರೆ ಚಂದ್ರಶೇಖರ್, ಡಿ.ನಾಗೇಂದ್ರ, ಬಿ.ಕೆ.ರವಿಕುಮಾರ್, ಆಲೂರು ಮಲ್ಲು, ಕೆ.ವೀರಭದ್ರಸ್ವಾಮಿ, ಮಲ್ಲಿಕಾರ್ಜುಸ್ವಾಮಿ, ಲಿಂಗರಾಜು, ಪ್ರಾಂಶುಪಾಲರಾದ ಮಹದೇವಸ್ವಾಮಿ, ದೇವರಾಜು, ಉಮೇಶ್, ಶಿಕ್ಷಕರು ಸಿಬ್ಬಂದಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net